Latest

ಬಾಂಬೆಗೆ ಹೋಗಿದ್ದೇ ಸಿಡಿ ಸೃಷ್ಟಿಗೆ ಕಾರಣ ಎಂದ ಕುಮಾರಸ್ವಾಮಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೀಳಿಸಿ ಬಾಂಬೆಗೆ ಹೋಗಿದ್ದೇ ಸಿಡಿ ಪ್ರಕರಣ ಸೃಷ್ಟಿಗೆ ಕಾರಣ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಕುಮಾರಸ್ವಾಮಿ, ಎಸಿಬಿ, ಎಸ್ ಐಟಿ ಸಿಡಿ ಪ್ರಕರಣವನ್ನು ನೋಡಿಕೊಳ್ಳಲಿದೆ. ತನಿಖೆ ನಡೆಸುವುದು ಸರ್ಕಾರದ ಜವಾಬ್ದಾರಿ. ಅದನ್ನು ಅವರು ಮಾಡಲಿ. ಸಿಡಿ ಮಾಡಲು ನಾವು ಕಾರಣವಲ್ಲ, ಎಲ್ಲರೂ ಬಾಂಬೆಗೆ ಹೋಗಿದ್ದೇ ಕಾರಣ. ಬಾಂಬೆಗೆ ಹೋಗಿದ್ದಕ್ಕೇ ಇವೆಲ್ಲ ನಡೆದಿದೆ. ಈ ಬಗ್ಗೆ ತನಿಖೆಯಾಗಿ ಸತ್ಯಾಂಶ ಹೊರಬರಲಿ ಎಂದು ಹೇಳಿದರು.

ಇದೇ ವೇಳೆ ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣೆ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಮಸ್ಕಿ ಅಭಿವೃದ್ಧಿಗೆ ಬಿಜೆಪಿಗೆ ಮತಹಾಕಿ ಎಂದು ಕೇಳುತ್ತಿದ್ದಾರೆ. ಈಗಗಾಲೇ ಬಿಜೆಪಿ ಅಧಿಕಾರಕ್ಕೆ ಬಂದು ಎರಡುವರ್ಷಗಳಾಯಿತು. ಎಲ್ಲೆಲ್ಲಿ ಯಾವ ಅಭಿವೃದ್ಧಿಗಳನ್ನು ಮಾಡಿದ್ದಾರೆ? ಎರಡು ವರ್ಷದಿಂದ ಅಧಿಕಾರದಲ್ಲಿರುವವರು ಇವರೇ ಈಗ ಅಭಿವೃದ್ಧಿಗೆ ಮತ ಕೇಳುತ್ತಿದ್ದಾರೆ ಎಂದರೆ ಹಾಸ್ಯಾಸ್ಪದ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button