Politics

*ಪೆನ್ ಡ್ರೈವ್ ಹಿಂದಿನ ಮಹಾನ್ ನಾಯಕರ ಬಗ್ಗೆ ಚರ್ಚೆಯಾಗಲಿ; ಮಾಜಿ ಸಿಎಂ ಹೆಚ್.ಡಿ.ಕೆ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸಾಮಿ, ವಿಡಿಯೋ ವೈರಲ್ ಹಿಂದೆ ಮಹಾನ್ ನಾಯಕರ ಕೈವಾಡದ ಬಗ್ಗೆಯೂ ಚರ್ಚೆಯಾಗಬೇಕು ಎಂದಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣನಿಂದ ತಪ್ಪಾಗಿದ್ದರೆ ಶಿಕ್ಷೆಯಾಗೇ ಆಗುತ್ತದೆ. ಅದರಲ್ಲಿ ಸಂಶಯಬೇಡ. ಆದರೆ ಇದರ ಹಿಂದೆ ಹಾಗೂ ಮುಂದೆ ಇರುವ ರಾಜಕಾರಣಿಗಳ ಬಗ್ಗೆ ಚರ್ಚೆಯಾಗಬೇಕು. ಆ ಮಹಾನ್ ನಾಯಕರ ಬಗ್ಗೆ ಚರ್ಚೆಯಾಗಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.

ಪೆನ್ ಡ್ರೈವ್ ಮಾಡಿಸುವುದರಲ್ಲಿ ಅವರು ನಿಷ್ಣಾತರು. ಈ ಪ್ರಕರಣದಲ್ಲಿ ಅವರ ಪಾತ್ರವೇನು? ಮಹಿಳೆಯರಿಂದ ಪ್ರತಿಭಟನೆ ಮಾಡಿಸುತ್ತಿದ್ದಾರಲ್ಲ ಈ ಬಗ್ಗೆ ಚರ್ಚೆಯಾಗಬೇಕು ಎಂದರು.

Home add -Advt


Related Articles

Back to top button