Latest

ಬೇಡ ಅಂದರೂ ದೇವೇಗೌಡರನ್ನು ಪ್ರಧಾನಿ ಮಾಡಿದ್ರು; ನನ್ನನ್ನು ಸಿಎಂ ಮಾಡಿದ್ರು

ಪ್ರಗತಿವಾಹಿನಿ ಸುದ್ದಿ; ಕೋಲಾರ: ಬೇಡ ಬೇಡ ಅಂದರೂ ಹೆಚ್.ಡಿ ದೇವೇಗೌಡರ ಕಾಲಿಗೆ ಬಿದ್ದು ಪ್ರಧಾನಿಯನ್ನಾಗಿ ಮಾಡಿದರು. ಆ ನಂತರ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿದ್ದು ಯಾರು? ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ದೇವೇಗೌಡರು ತನ್ನನ್ನು ಪ್ರಧಾನಿಯನ್ನಾಗಿ ಮಾಡಿ ಎಂದು ಅರ್ಜಿ ಹಾಕಿರಲಿಲ್ಲ. ಬೇಡ ಅಂದ್ರೂ ಪ್ರಧಾನಿ ಹುದ್ದೆ ನೀಡಿದರು. ಮೊನ್ನೆ ನಾನು ಬೇಡಪ್ಪಾ ಸಿಎಂ ಸ್ಥಾನ ಎಂದರೂ ಕೇಳದೇ ಸಿಎಂ ಹುದ್ದೆ ನೀಡಿದರು. ಅಧಿಕಾರಕ್ಕಾಗಿ ನಾವು ಅರ್ಜಿ ಹಾಕಿ ಹೋಗಿರಲಿಲ್ಲ ಎಂದು ಕಿಡಿಕಾರಿದರು.

Home add -Advt

ಇನ್ನು ನಾನು ಮುಖ್ಯಮಂತ್ರಿಯವರನ್ನು ಭೇಟಿಯಾಗಬೇಕು ಎಂದರೆ ನೇರವಾಗಿ ಹೋಗಿ ಭೇಟಿಯಾಗುತ್ತೇನೆ. ಜನರಿಗಾಗಿ ಕೆಲಸಗಳನ್ನು ಮಾಡಿಸಿಕೊಂಡು ಬರುತ್ತೇನೆ. ಡಿ.ಕೆ.ಶಿವಕುಮಾರ್ ಅವರಂತೆ ಮಧ್ಯರಾತ್ರಿ ಹೋಗಿ ಸಿಎಂ ಭೇಟಿಯಾಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿಗೆ ಡಿ.ಕೆ.ಶಿವಕುಮಾರ್ ತಿರುಗೇಟು

Related Articles

Back to top button