ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚುನಾವಣೆಯಲ್ಲಿ ಎಲ್ಲರೂ ಸೇರಿ ಮಗ ನಿಖಿಲ್ ನನ್ನು ಸೋಲಿಸಿದರು. ಆ ಸೋಲನ್ನು ಮರೆತಿಲ್ಲ. ಎಲ್ಲರೂ ಸೇರಿ ನಮ್ಮನ್ನು ಮುಗಿಸಿಬಿಟ್ಟಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭಾವುಕರಾಗಿದ್ದಾರೆ.
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ನಿಖಿಲ್ ಚುನಾವಣೆಗೆ ನಿಲ್ಲೋದು ಬೇಡ ಎಂದು ಹೇಳಿದ್ದೆ. ಆದರೆ ಎಲ್ಲರೂ ಸೇರಿ ನಿಲ್ಲಿಸಿದರು. ನಮ್ಮನ್ನು ಸೋಲಿಸಬೇಕು ಎಂದು ಯೋಜನೆ ರೂಪಿಸಿಯೇ ನಿಲ್ಲಿಸಿದ್ದರು. ಕೊನೆಗೂ ಎಲ್ಲರೂ ಸೇರಿ ನಮ್ಮನ್ನು ಮುಗಿಸಿಬಿಟ್ಟರು. ಆದರೂ ನಮಗೆ ಮಂಡ್ಯ ಜಿಲ್ಲೆ ಜನರ ಬಗ್ಗೆ ಬೇಸರವಿಲ್ಲ ಎಂದು ಕಣ್ಣೀರಾದರು.
ನನಗೆ ವೈಯಕ್ತಿಕವಾಗಿ ರಾಜಕೀಯದಲ್ಲಿ ಮುಂದುವರೆಯುವ ಬಗ್ಗೆ ಆಸಕ್ತಿಯಿಲ್ಲ. ನಾನು ರಾಜಕೀಯದಿಂದ ನಿವೃತ್ತಿಯಾಗಬೇಕು ಎಂದುಕೊಂಡಿದ್ದೆ. ಆದರೆ ಜನರ ಪ್ರೀತಿ ನೋಡಿ ನಾನು ರಾಜಕೀಯ ನಿವೃತ್ತಿ ಪಡೆದರೆ ಅವರಿಗೆ ಅನ್ಯಾಯವಾಗಿಬಿಡುತ್ತೆ ಎಂಬ ಕಾರಣಕ್ಕೆ ಮುಂದುವರೆದಿದ್ದೇನೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ