*ಡಿ.ಕೆ.ಶಿವಕುಮಾರ್ ಸವಾಲು ಸ್ವೀಕರಿಸಿದ್ದೇನೆ; ಚರ್ಚೆಗೆ ಡೇಟ್ ಫಿಕ್ಸ್ ಮಾಡಲಿ ಎಂದ HDK*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮರಸ್ವಾಮಿ ನಡುವಿನ ರಾಜಕೀಯ ಸಮರ ತಾರಕಕ್ಕೇರಿದ್ದು, ಡಿಸಿಎಂ ಹಾಕಿದ ಸವಾಲನ್ನು ಸ್ವೀಕರಿಸುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಡಿಸಿಎಂ ಡಿ.ಕೆ.ಶಿವಕುಮಾರ್ ಕೆಲ ಸವಾಲುಗಳನ್ನು ಹಾಕಿದ್ದಾರೆ. ಅವರ ಸವಾಲು ಸ್ವೀಕರಿಸುತ್ತೇನೆ. ಬಹಿರಂಗವಾಗಿ ಚರ್ಚೆಗೆ ಬರಲಿ, ಅವರ ಹಿಸ್ಟ್ರಿ, ನನ್ನ ಹಿಸ್ಟ್ರಿ ಚರ್ಚೆಯಾಗಲಿ ಎಂದಿದ್ದಾರೆ. ಅವರ ಸವಾಲು ಸ್ವೀಕರಿಸುತ್ತೇನೆ. ನಾನು ಚರ್ಚೆಗೆ ಸಿದ್ದ. ಮೂರು ದಿನಗಳ ನಂತರ ಯಾವಾಗ ಬೇಕಾದರೂ ಚರ್ಚೆಗೆ ಬರಲು ಸಿದ್ಧನಿದ್ದೇನೆ. ಡೇಟ್ ಫಿಕ್ಸ್ ಮಾಡಲಿ ಎಂದರು.
ನಾನು ಪಲಾಯನವಾದಿಯಲ್ಲ. ಬಹಿರಂಗ ಚರ್ಚೆಗೆ ರೆಡಿ ಇದ್ದೇನೆ. ನನ್ನ ಬಳಿಯೂ ಚರ್ಚೆಗೆ ಸರಕುಗಳಿವೆ. ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ ಎಂದು ಹೇಳಿದ್ದಾರೆ. ಇನ್ನು ಶಾಸಕರೊಬ್ಬರು ಕುಮರಸ್ವಾಮಿ ಹಣ ಪಡೆದಿಲ್ಲವೇ? ಇಲ್ಲ ಎನ್ನುವುದಾದರೆ ಪ್ರಮಾಣ ಮಾಡಲಿ ಎಂದಿದ್ದಾರೆ. ಅದಕ್ಕೂ ಸಿದ್ಧನಿದ್ದೇನೆ. ನಾನು ಯಾವ ಹಣವನ್ನೂ ಪಡೆದಿಲ್ಲ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ