Wanted Tailor2
Cancer Hospital 2
Bottom Add. 3

*ವೋಟಿಗಾಗಿ ಗಿಫ್ಟ್‌ ಕೂಪನ್! ಕಾಂಗ್ರೆಸ್‌ ಅಭ್ಯರ್ಥಿಯೊಬ್ಬರು ಹಂಚಿದ್ದ ಗಿಫ್ಟ್‌ ಕೂಪನ್‌ ಪ್ರದರ್ಶಿಸಿದ ಕುಮಾರಸ್ವಾಮಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹುಷಾರು! ಕಾಂಗ್ರೆಸ್‌ ನವರು ರಾತ್ರಿ ಹೊತ್ತು ಬಂದು ಕ್ಯೂರ್‌ ಕೋಡ್‌ ಇರುವ ಗಿಫ್ಟ್ ಕೂಪನ್ನುಗಳನ್ನು ಹಂಚುತ್ತಾರೆ. 3,000 ಹಾಗೂ 5,000 ರೂಪಾಯಿ ಮೌಲ್ಯದ ಕೂಪನ್ನುಗಳನ್ನು ಕೊಟ್ಟು ಯಾಮಾರಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೆಲಂಗಾಣ ಸೇರಿ ಚುನಾವಣೆ ನಡೆಯುತ್ತಿರುವ ಐದೂ ರಾಜ್ಯಗಳ ಮತದಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಪಕ್ಷದ ರಾಜ್ಯ ಜೆಪಿ ಭವನದಲ್ಲಿ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ; ಕರ್ನಾಟಕದ ರಾಮನಗರ, ಮಾಗಡಿ, ಕನಕಪುರ, ಕುಣಿಗಲ್ ಸೇರಿ ಐವತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ‌ ರಾತ್ರೋರಾತ್ರಿ ಕಾಂಗ್ರೆಸ್‌ ಪಕ್ಷ ಮತದಾರರಿಗೆ ಕೂಪನ್ನುಗಳನ್ನು ಹಂಚಿತ್ತು. “ಮೊದಲು ವೋಟು ಮಾಡಿ. ಆಮೇಲೆ ಬೆಂಗಳೂರಿಗೆ ಹೋಗಿ ಮಾಲ್‌ ನಲ್ಲಿ ಕೂಪನ್‌ ಕೊಟ್ಟು ಅದರ ಮೌಲ್ಯದ ವಸ್ತುಗಳನ್ನು ಖರೀದಿ ಮಾಡಿ” ಎಂದು ಆಮಿಷ ಒಡ್ಡಿತ್ತು ಎಂದು ಆರೋಪಿಸಿದರು.

ವೋಟು ಹಾಕಿದ ಜನ ಮಾಲ್‌ ಗೆ ಬಂದು ಕೂಪನ್‌ ಕೊಟ್ಟರೆ, ಈ ಕೂಪನ್‌ʼಗೆ ಯಾವ ಮೌಲ್ಯವೂ ಇಲ್ಲ. ಅದರಲ್ಲಿ ದುಡ್ಡಿಲ್ಲ. ವಸ್ತುಗಳು ಬೇಕಿದ್ದರೆ ದುಡ್ಡು ಕೊಟ್ಟು ಖರೀದಿ ಮಾಡಿ. ಇಲ್ಲವಾದರೆ ಸುಮ್ಮನೆ ಹೋಗಿ ಎಂದು ಮಾಲ್‌ ನವರು ಹೇಳಿದ್ದರು. ತೆಲಂಗಾಣದಲ್ಲಿ ಇಂಥ ಕೂಪನ್ನುಗಳನ್ನು ಕಾಂಗ್ರೆಸ್‌ ಹಂಚುವ ಸಾಧ್ಯತೆ ಇದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದರು.

ಅಲ್ಲದೆ; ಕಾಂಗ್ರೆಸ್‌ ಪಕ್ಷಕ್ಕೆ ವಾಮಮಾರ್ಗದಿಂದ ಚುನಾವಣೆ ಗೆಲ್ಲುವುದು ಕರತಲಾಮಲಕ. ಹೀಗಾಗಿ ಭಾರತ್‌ ರಾಷ್ಟ್ರ ಸಮಿತಿ, ಬಿಜೆಪಿ ಸೇರಿದಂತೆ ಕಾಂಗ್ರೆಸ್‌ ವಿರೋಧಿ ಪಕ್ಷಗಳು ತೀವ್ರ ನಿಗಾ ವಹಿಸಬೇಕು ಎಂದು ಅವರು ಸಲಹೆ ಮಾಡಿದರು.

Bottom Add3
Bottom Ad 2

You cannot copy content of this page