
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಆರಂಭವಾಗಿರುವ ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಜನರು ಹಬ್ಬ ಆಚರಿಸುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಯುಗಾದಿ ಸಂದರ್ಭದಲ್ಲಿಯೇ ಹಲಾಲ್, ಜಟ್ಕಾ ಕಟ್ ವಿವಾದ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕಟ್ಟೆಚ್ಚರ ವಹಿಸಲು ಎಲ್ಲಾ ಜಿಲ್ಲಾ ಎಸ್ ಪಿ ಹಾಗೂ ಡಿಸಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಅವರವರ ಧರ್ಮ, ಹಬ್ಬಗಳ ಆಚರಣೆಗೆ ಅವರವರಿಗೆ ಸ್ವಾತಂತ್ರ್ಯ ಇದೆ. ಇದನ್ನು ಅರಿತು ಜನರು ಶಾಂತರೀತಿಯಿಂದ ಹಬ್ಬ ಆಚರಣೆ ಮಾಡಬೇಕು. ಯಾರೂ ಕೂಡ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತೆ ವರ್ತಿಸಬಾರದು ಎಂದು ಹೇಳಿದರು.
ಬೆಳಗಾವಿಯ ವಿಜಯ ಸಿನ್ನೂರ್ ಅವರಿಗೆ ಪೊಲೀಸ್ ಪದಕ ಪ್ರದಾನ ಮಾಡಿದ ಸಿಎಂ ಬೊಮ್ಮಾಯಿ