ಪ್ರಗತಿವಾಹಿನಿ ಸುದ್ದಿ; ಉಡುಪಿ: ದಲಿತರ ಮನೆಯಲ್ಲಿ ಪೇಜಾವರಶ್ರೀ ವಾಸ್ತವ್ಯದ ಬಗ್ಗೆ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ನೀಡಿರುವ ಹೇಳಿಕೆಗೆ ವಿಶ್ವಪ್ರಸನ್ನ ತೀರ್ಥರು ಪ್ರತಿಕ್ರಿಯಿಸಿದ್ದು, ಹಂಸಲೇಖಾರಿಂದ ಇಂಥ ಮಾತು ಬರಬಾರದಿತ್ತು. ಸಮಾಜ ಅವರನ್ನು ಎತ್ತರದಲ್ಲಿ ಇರಿಸಿ ಗೌರವಿಸುತ್ತದೆ ಹಂಸಲೇಖಾ ಅವರಿಗೆ ಇಂತಹ ಹೇಳಿಕೆ ಬೇಕಿರಲಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಹಂಸಲೇಖ ನನ್ನ ಗುರುಗಳನ್ನು ಟೀಕೆ ಮಾಡಿರಬಹುದು. ಹಲವರು ಪ್ರಚಾರಕ್ಕಾಗಿ ಹೀಗೆ ಮಾಡುತ್ತಾರೆ. ಆದರೆ ಹಂಸಲೇಖಾ ಅವರಿಗೆ ಇದರಿಂದ ಪ್ರಚಾರ ಬೇಕಿರಲಿಲ್ಲ. ನನ್ನ ಗುರುಗಳು ಎಲ್ಲರಲ್ಲಿ ಕೃಷ್ಣನನ್ನು ಕಂಡವರು. ಹಾಗಾಗಿ ಅವರು ದಲಿತರ ಕೇರಿಗೂ ಹೋಗುತ್ತಿದ್ದರು. ಸಮಾಜದ ಎಲ್ಲರ ಉದ್ಧಾರ ವಿಶ್ವೇಶತೀರ್ಥರು ಬಯಸಿದ್ದರು. ನಮ್ಮ ಉದ್ದೇಶ ಪ್ರಾಮಾಣಿಕವಾಗಿದ್ದರೆ ಸಾಕು ಯಾರೋ ಏನೋ ಹೇಳಿದರೆಂದು ನಮ್ಮ ಕೆಲಸಗಳು ನಿಲ್ಲಲ್ಲ ಎಂದಿದ್ದಾರೆ.
ಶ್ರೀಕೃಷ್ಣನಿಗೆ ಅಗ್ರಪೂಜೆ ನೀಡುವಾಗ ಶಿಶುಪಾಲ ವಿರೋಧಿಸಿದ್ದ… ಆ ಕೃಷ್ಣನೇ ಬೇಕಾದ ಪ್ರತಿಕಾರ ಮಾಡುತ್ತಾನೆ… ಶಿಶುಪಾಲನಿಗೆ ಕೃಷ್ಣನೇ ತಕ್ಕಶಾಸ್ತಿ ಮಾಡಿದ್ದ… ಯಾರ ಹೊಗಳಿಕೆಗಾಗಿ ನಾವು ಈ ಕೆಲಸ ಮಾಡಿದ್ದಲ್ಲ. ಐಕ್ಯ ಸಂದೇಶ ನೀಡುವುದಕ್ಕಾಗಿ ನಮ್ಮ ಕಾರ್ಯಕ್ರಮಗಳು ನಡೆಯುತ್ತವೆ ಎಂದು ತಿಳಿಸಿದರು.
ಇನ್ನು ನಮ್ಮ ಗುರುಗಳ ಮೇಲೆ ಅಭಿಮಾನದಿಂದ ಯಾರಾದರೂ ಧರಣಿ ಮಾಡಿದರೆ ಅದು ಪ್ರತಿಭಟನೆ ಮಾಡುವವರ ವೈಯಕ್ತಿಕ ವಿಚಾರವಾಗಿರುತ್ತದೆ. ನಾವು ಯಾವುದೇ ರೀತಿಯ ಪ್ರತಿಭಟನೆ ಮಾಡಲ್ಲ ಎಂದು ವಿಶ್ವಪ್ರಸನ್ನ ಶ್ರೀ ತಿಳಿಸಿದ್ದಾರೆ.
ಹಂಸಲೇಖ ಕ್ಷಮೆಯಾಚನೆ; ನನ್ನ ಹೆಂಡತಿಗೇ ಹಿಡಿಸಲಿಲ್ಲ ಎಂದ ನಾದಬ್ರಹ್ಮ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ