Kannada NewsKarnataka News

*ಹರ್ ಘರ್ ಭಗವಾ ; ಹರ್ ಘರ್ ಶಿವ-ಬಸವ ಅಭಿಯಾನ*

 ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಬಿಜೆಪಿ ಗ್ರಾಮೀಣ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಅವರ ಸಾರ್ವಜನಿಕ ದೂರು ಪರಿಹಾರಕೇಂದ್ರದ ವತಿಯಿಂದ *ಹರ್ ಘರ್ ಭಗವಾ* *ಹರ್ ಘರ್ ಶಿವಬಸವ* ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಅವರೊಳ್ಳಿಯ ಶ್ರೀ ಚನ್ನಬಸವ ಸ್ವಾಮೀಜಿ,  ಹಿರೇಮುನವಳ್ಳಿಯ ಶಾಂಡಿಲ್ಯೇಶ್ವರ ಮಠದ ಶ್ರೀ ಸಿದ್ಧ ಶಿವಯೋಗಿ, ಚಿಕ್ಕಮುನವಳ್ಳಿ ಆರೂಢ ಮಠದ ದಿವ್ಯಚೇತನ ಶಿವಪುತ್ರ ಮಹಾ ಸ್ವಾಮೀಜಿ, ಪಾರಿಶ್ವಾಡದ ವೇದಮೂರ್ತಿ ಶ್ರೀ ಗುರುಸಿದ್ಧಯ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಸಂಜಯ ಪಾಟಿಲ  ಅಭಿಯಾನಕ್ಕೆ ಚಾಲನೆ ನೀಡಿದರು.
ಭಾವಚಿತ್ರ ಮತ್ತು ಭಗವಾ ಧ್ವಜ ವಿತರಣೆ;
ಡಾ.ಸೋನಾಲಿ ಸರ್ನೋಬತ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಯುವಕರಲ್ಲಿ ಹಿಂದೂ ಸಂಸ್ಕೃತಿಯನ್ನು ಬೆಳೆಸಲು ಮತ್ತು ಪ್ರೋತ್ಸಾಹಿಸಲು ಈ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಅವರು ಹೇಳಿದರು. ಇಂದು ಮಹಿಳೆಯರು ನಮ್ಮ ಪವಿತ್ರ ಭಗವದ್ಗೀತೆಯನ್ನು ಓದಲು ಮತ್ತು ಅರ್ಥಮಾಡಿಕೊಳ್ಳಲು ಅಭ್ಯಾಸ ಮಾಡಬೇಕು ಮತ್ತು ನಮ್ಮ ಮಕ್ಕಳಿಗೆ ಈ ಬಗ್ಗೆ ತಿಳಿವಳಿಕೆ ನೀಡಬೇಕು. ರಾಷ್ಟ್ರಭಕ್ತಿ ಮತ್ತು ಆತ್ಮಶಕ್ತಿ ಹಿಂದೂ ಧರ್ಮ ಮತ್ತು ಸನಾತನ ಸಂಸ್ಕ್ರತಿಯ ಎರಡು ಪ್ರಮುಖ ಅಂಶಗಳಾಗಿವೆ ಎಂದು ಸೋನಾಲಿ ಸರ್ನೋಬತ್ ಹೇಳಿದರು.
 ಆಧ್ಯಾತ್ಮಿಕತೆಯ ಮಹತ್ವ ಮತ್ತು ಸನಾತನ ಹಿಂದೂ ಧರ್ಮದ ಪವಿತ್ರ ಗ್ರಂಥಗಳು ಮತ್ತು ಆಚರಣೆಗಳ ಕಲಿಕೆಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ ವಿವಿಧ ಸ್ವಾಮೀಜಿಗಳು, ಹಿಂದೂ ಧರ್ಮ ಮತ್ತು ನಮ್ಮ ಪೂರ್ವಜರ ಪರಂಪರೆಯ ಬಗ್ಗೆ ಯುವಕರನ್ನು ಪ್ರೇರೇಪಿಸಲು ಡಾ. ಸೋನಾಲಿ ಸರ್ನೋಬತ್ ಅವರು ಮಾಡುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದರು.
ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಅವರು ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಜಗದ್ಗುರು ಬಸವೇಶ್ವರ ಮಹಾರಾಜರ ವಿಚಾರಧಾರೆಗಳ ಕುರಿತು ಮಾತನಾಡಿದರು. ಇಂತಹ ಅಭಿಯಾನಗಳು ಹಿಂದೂ ಧರ್ಮವನ್ನು ಬಲಪಡಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಿರಣ ಯೆಳ್ಳೂರಕರ್, ರಾಜೇಂದ್ರ ರಾಯ್ಕ, ಚಂದ್ರಕಾಂತ ಕೋಲ್ಕರ್, ಅರ್ಜುನ್ ಗಾವಡೆ, ಅನಂತ್ ಗಾವಡೆ, ಈಶ್ವರ ಸಾನಿಕೋಪ್, ರೋಷನ್ ಸುತಾರ್, ಬಾಳೇಶ್ ಚವ್ಹಾಣ್, ನಾಗೇಶ ರಾಮಾಜಿ, ಅನಿತಾ ಕೋಮಸ್ಕರ್, ಗಂಗೂತಾಯಿ ತಳವಾರ, ಕಾವ್ಯಾ, ಡಾ.ಸೋನಾಲಿ ಸರ್ನೋಬತ್ ಅವರ ಕಾರ್ಯಕರ್ತರು ಉಪಸ್ಥಿತರಿದ್ದರು.
ಭಗವಾಧ್ವಜ ಮತ್ತು ಶಿವಬಸವ ಛಾಯಾಚಿತ್ರಗಳನ್ನು ಖಾನಾಪುರದ ಮನೆ ಮನೆಗೆ ವಿತರಿಸಲಾಗುವುದು.
ಈ ಹಿಂದೆ ಡಾ ಸರ್ನೋಬತ್ ಅವರು ಖಾನಾಪುರದಲ್ಲಿ ಭಾರತಮಾತಾ ಫೋಟೋ ಅಭಿಯಾನ ಮತ್ತು ತಿರಂಗ ಅಭಿಯಾನವನ್ನು ಯಶಸ್ವಿಯಾಗಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

 

https://pragati.taskdun.com/minor-rape-victimshootsmother-of-accuseddelhi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button