ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ಸ್ಫೋಟಗೊಂಡಿದ್ದು, ರೂಪಾಂತರಿ ವೈರಸ್ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಹರಿದ್ವಾರದಲ್ಲಿ ಸಂಕ್ರಾಂತಿಯ ಪವಿತ್ರ ಸ್ನಾನಕ್ಕೆ ನಿಷೇಧ ಹೇರಲಾಗಿದೆ.
ಮಕರ ಸಂಕ್ರಾಂತಿ ಹಿನೆಲೆಯಲ್ಲಿ ಜನವರಿ 14ರಂದು ಹರಿದ್ವಾರದಲ್ಲಿ ಪವಿತ್ರ ಗಂಗಾ ಸ್ನಾನಕ್ಕಾಗಿ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸುವುದು ಪದ್ಧತಿ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಈಬಾರಿ ಗಂಗಾ ಸ್ನಾನಕ್ಕೆ ನಿಷೇಧ ಹೇರಿ ಅಲ್ಲಿನ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ಹರಿದ್ವಾರದಲ್ಲಿ ಹಲವು ಕಟ್ಟುನಿಟ್ಟಿನ ಕ್ರಮ ಜಾಅರಿಗೊಳಿಸಲಾಗಿದ್ದು, ಹರಿ ಕಿ ಪೌರಿ ಪ್ರದೇಶದಲ್ಲಿ ಪವಿತ್ರ ಸ್ನಾನ ನಿಷೇಧಿಸಲಾಗಿದ್ದು, ನೈಟ್ ಕರ್ಫ್ಯೂ ಜಾರೊಗೊಳಿಸಲಾಗಿದೆ.
ಅಲ್ಲದೇ ಹೊರ ರಾಜ್ಯದಿಂದ ಬರುವ ಭಕ್ತರು ಹಾಗೂ ಪ್ರವಾಸಿಗರ ಪ್ರವೇಶ ರದ್ದುಗೊಳಿಸಲಾಗಿದ್ದು, ಕೋವಿಡ್ ನಿಯಮ ಉಲ್ಲಂಘಿಸುವವರ ವಿರುದ್ಧ ಸಾಂಕ್ರಾಮಿಕ ರೋಗ ಕಾಯ್ದೆ 1897ರ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಕರುನಾಡಿಗೆ ಶುರುವಾಯ್ತು ಮತ್ತೆ ಲಾಕ್ ಡೌನ್ ಭೀತಿ; ಸಿಎಂ ಸಭೆಗೂ ಮುನ್ನ ತುರ್ತು ಸಭೆ ಕರೆದ ಆರೋಗ್ಯ ಸಚಿವ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ