
ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಶಿವಮೊಗ್ಗದಲ್ಲಿ ಇತ್ತೀಚೆಗೆ ಹತ್ಯೆಯಾಗಿದ್ದ ಬಜರಂಗದಳ ಕಾರ್ಯಕರ್ತ ಹರ್ಷನ ಸಹೋದರಿಯನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಜೋರು ಮಾಡಿ ಕೈಳುಹಿಸಿದ್ದಾರಾ? ಗೃಹ ಸಚಿವರ ವಿರುದ್ಧ ಹರ್ಷ ಸಹೋದರಿ ಅಶ್ವಿನಿ ಇಂಥದ್ದೊಂದು ಆರೋಪ ಮಾಡಿದ್ದಾರೆ.
ನ್ಯಾಯ ಕೇಳಲು ಬೆಂಗಳೂರಿನ ಗೃಹ ಸಚಿವರ ಕಚೇರಿಗೆ ಹೋದರೆ ಅಲ್ಲಿ ಗೃಹ ಸಚಿವರು ಜೋರು ಮಾಡಿ ಬಾಯಿ ಮುಚ್ಚಿಸಿ ಕಳುಸಿದ್ದಾರೆ. ಸರ್ಕಾರದವರೇ ಹೀಗೆ ಮಾಡಿದರೆ ನಾವು ಯಾರ ಬಳಿ ಹೋಗಿ ನ್ಯಾಯ ಕೇಳಬೇಕು? ನಮಗೆ ಎಲ್ಲಿಯೂ ನ್ಯಾಯ ಸಿಗಲ್ಲ ಎಂಬುದು ಇಂದು ನನಗೆ ಗೊತ್ತಾಗಿ ಹೋಯಿತು. ವ್ಯವಸ್ಥೆಯ ಮೇಲೆಯೇ ನಂಬಿಕೆ ಕಳೆದುಕೊಂಡಿದ್ದೇವೆ ಎಂದು ನೋವು ತೋಡಿಕೊಂಡಿದ್ದಾರೆ.
ಹರ್ಷನ ಕೊಲೆ ಆರೋಪಿಗಗಳು ಬೆಗಳೂರಿನ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದು, ಅಲ್ಲಿ ಅವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಪ್ರಶ್ನಿಸಲೆಂದು ಹರ್ಷ ಸಹೋದರಿ ಅಶ್ವಿನಿ ಗೃಹ ಸಚಿವರ ಕಚೇರಿಗೆ ತೆರಳಿದ್ದಾರೆ. ಅಲ್ಲದೇ ನಮಗೆ ನ್ಯಾಯ ಕೊಡಿಸುವಂತೆ ಕೇಳಿದ್ದಾರೆ. ಈ ವೇಳೆ ಗೃಹ ಸಚಿವ ಅರಗ ಜ್ಞಾನೇಂದ್ರ ಎಷ್ಟು ಮಾತಾಡ್ತೀಯಮ್ಮ ನೀನು ಎಂದು ಜೋರು ದ್ವನಿಯಲ್ಲಿ ಗದರಿದ್ದಾರೆ ಎನ್ನಲಾಗಿದೆ.
ಗೃಹ ಸಚಿವರು ನಮ್ಮ ಸಂಕಷ್ಟಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಜೋರು ಮಾಡಿ ವಾಪಸ್ ಕಳುಹಿಸಿದ್ದಾರೆ. ಗೃಹ ಸಚಿವರಾದವರು ಹೀಗೆ ಬೆದರಿಸಿ ಕಳುಹಿಸಿದರೆ ನಾವು ಯಾರ ಬಳಿ ನ್ಯಾಯಕೇಳಬೇಕು? ಎಂದು ಪ್ರಶ್ನಿಸಿದ್ದಾರೆ.
ಲಾಲು ಪ್ರಸಾದ್ ಯಾದವ್ ದೇಹ ಲಾಕ್; ದೆಹಲಿಗೆ ಏರ್ ಲಿಫ್ಟ್