ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಾಳೇಕುಂದ್ರಿ ಬಿಕೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಹರ್ಷಾ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಗೊಂಡವಾಡ ಗ್ರಾಮದ ಎಸ್ ಬಿ ಎಸ್ ಮಾರ್ಕೆಟಿಂಗ್ ತಂಡ ಜಯಭೇರಿ ಬಾರಿಸುವ ಮೂಲಕ ಪ್ರಶಸ್ತಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.
ಸುಮಾರು 40 ಗ್ರಾಮೀಣ ಭಾಗದ ಕ್ರಿಕೆಟ್ ತಂಡಗಳು ಪ್ರಶಸ್ತಿಗಳನ್ನು ಗೆಲ್ಲಲು ಸೆಣಸಾಟ ನಡೆಸಿದ್ದವು. ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಪಂದ್ಯಾವಳಿಗಳು ನಡೆದು, ಫೈನಲ್ ಪಂದ್ಯದಲ್ಲಿ 1st ರನ್ನರ್ ಅಪ್ ಆಗಿ ಯಳ್ಳೂರ ಗ್ರಾಮದ ಚಾಂಗಳೇಶ್ವರ ತಂಡ ಹಾಗೂ 2nd ರನ್ನರ್ ಅಪ್ ಆಗಿ ಹಿಂಡಲಗಾ ಗ್ರಾಮದ ನೀಲ್ ಇಂಡಿಯನ್ ಬಾಯ್ಸ್ ತಂಡಗಳು ಪ್ರಶಸ್ತಿ ಪಡೆದವು.
ಹರ್ಷಾ ಟ್ರೋಫಿ ಗ್ರಾಮೀಣ ಭಾಗದ ತಂಡಗಳಿಗೆ ಒತ್ತು ನೀಡುವ ಮುಖೇನ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಲು ಉತ್ತಮ ವೇದಿಕೆಯಾಗಿ ಹೊರಹೊಮ್ಮಿದ್ದು, ಮುಂಬರುವ ದಿನಗಳಲ್ಲಿ ಎಲ್ಲ ತರಹದ ಕ್ರೀಡೆಗಳಿಗೂ ಸಹ ಪ್ರಾಮುಖ್ಯತೆಯನ್ನು ನೀಡಿ ಪಂದ್ಯಾವಳಿಗಳನ್ನು ಆಯೋಜಿಸಲಾಗುವುದು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ತಿಳಿಸಿದ್ದಾರೆ.
ವಿಜೇತ ತಂಡಗಳಿಗೆ ಚನ್ನರಾಜ ಹಟ್ಟಿಹೊಳಿ ಟ್ರೋಫಿ ಹಾಗೂ ಬಹುಮಾನಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಬಸವರಾಜ ಕಲ್ಲೂರ, ಅಬ್ದುಲ್ ಬಾಗವಾನ್, ಶಿವರಾಜ ಜಾಧವ್, ಫಯಿಮ್ ಯಾದವಾಡ, ಪ್ರವೀಣ ಕೊಪ್ಪದ, ಅಪ್ಸರ್ ಜಮಾದಾರ, ಅಯ್ಜಾಜ್ ಪಠಾಣ, ಜಮೀಲ್ ಖಾಜಿ, ಪ್ರೇಮ್ ಕೋಲಕಾರ, ಕ್ರಿಕೆಟ್ ತಂಡಗಳು, ಕ್ರಿಕೆಟ್ ಮ್ಯಾನೇಜ್ಮೆಂಟ್ ನ ಎಲ್ಲ ಪದಾಧಿಕಾರಿಗಳು ಹಾಗೂ ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು.
*ಕುಟುಂಬ ಸಮೇತ ಆತ್ಮಹತ್ಯೆಗೆ ಶರಣಾದ BJP ನಾಯಕ*
https://pragati.taskdun.com/bjp-leaderfamilysuicidemadhyapradesh/
ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದಕ್ಕೆ ಈ ಜನ ಸಾಗರವೇ ಸಾಕ್ಷಿ – ಡಿ.ಕೆ.ಶಿವಕುಮಾರ
https://pragati.taskdun.com/this-sea-of-people-is-proof-that-the-congress-party-will-come-to-power-in-the-future-dk-shivakumar/
ಶನಿವಾರ ಅಮಿತ್ ಶಾ ಆಗಮನ : 4 ವಿಧಾನಸಭಾ ಕ್ಷೇತ್ರ ಟಾರ್ಗೆಟ್; 75 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ
https://pragati.taskdun.com/amit-shahs-arrival-on-saturday-4-assembly-constituencies-target-more-than-75-thousand-people-are-expected/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ