ಪ್ರಗತಿವಾಹಿನಿ ಸುದ್ದಿ, ಮುಗಳಖೋಡ: ಗೋಕಾಕ ತಾಲೂಕಿನ ಸಂಗನಕೇರಿ ಗ್ರಾಮದ ರತ್ನವ್ವ ಕುರಬೆಟ್ಟ (೬೫) ಎಂಬ ವೃದ್ಧೆ ಮಾನಸಿಕ ಖಿನ್ನತೆಗೆ ಒಳಗಾಗಿ ಇಲ್ಲಿನ ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ಹಾರಿದ್ದಳು.
ನೀರಿನ ರಭಸ ಹಾಗೂ ಸೆಳೆತದಿಂದಾಗಿ ನೀರಿನಲ್ಲಿ ಮುಳುಗಿ ಮುಳುಗಿ ಏಳುತ್ತಾ ೧೦೦ ಮೀ.ವರೆಗೂ ಹೋದ ವೃದ್ಧೆಯನ್ನು ಕಂಡ ಅಕ್ಕ-ಪಕ್ಕದವರು ಹಾರೂಗೇರಿಯ ಪೋಲಿಸ್ ಠಾಣಾ ವ್ಯಾಪ್ತಿಯ ಮುಗಳಖೋಡ ಉಪಠಾಣೆಯ ಪೋಲಿಸರಿಗೆ ಕರೆ ಮಾಡಿ ಮಾಹಿತಿ ನೀಡಿದರು.
ಘಟನೆಯ ವಿವರವನ್ನು ಹೇಳಿದಾಗ ತತ್‌ಕ್ಷಣ ಪೋಲಿಸರು ಸ್ಥಳಕ್ಕೆ ಧಾವಿಸಿ ಹಗ್ಗದ ಸಹಾಯದಿಂದ ವೃದ್ದೆಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೋಲಿಸ್ ಇಲಾಖೆಯ ಪಿ.ಕೆ.ದೋಣಿ ಮತ್ತು ಎಲ್.ಎಸ್.ಸಡ್ಡಿಯವರ ಕಾರ್ಯವನ್ನು ಮೆಚ್ಚಿ ಸ್ಥಳೀಯರು ಧನ್ಯವಾದ ಸಲ್ಲಿಸಿದ್ದಾರೆ.
ನೆರೆಯ ಮನೆಯ ಮಹಿಳೆಯರು ಅಜ್ಜಿಗೆ ಬಟ್ಟೆ ತೊಡಿಸಿ, ಚಹಾ, ಲಿಂಬು ಸೇವಿಸಲು ಕೊಟ್ಟರು. ನಂತರ ಪ್ರಥಮ ಚಿಕಿತ್ಸೆ ನೀಡಿ ಮುಗಳಖೋಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ವೃದ್ಧೆಯ ಪುತ್ರ ಮಹಾದೇವ ಕುರಬೆಟ್ಟ ಈತನನ್ನು ಕರೆಯಿಸಿ ತಾಯಿಯನ್ನು ಚೆನ್ನಾಗಿ ಜೋಪಾನ ಮಾಡುವಂತೆ ತಿಳಿಸಿ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ.
ಯುವ ಅಧಿಕಾರಿಗಳಿಬ್ಬರ ಜೋಡಿ: ಬೆಳಗಾವಿಗೆ ಕೀರ್ತಿಯ ಗರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ