ಪ್ರಗತಿವಾಹಿನಿ ಸುದ್ದಿ; ಹರ್ಯಾಣ: ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿದ್ದ ಡಿವೈಎಸ್ ಪಿ ಸುರೇಂದ್ರ ಸಿಂಗ್ ಬಿಷ್ಣೋಯ್ ಅವರನ್ನು ದುಷ್ಕರ್ಮಿಗಳು ಹತ್ಯೆಗೈದ ಘಟನೆ ಹರ್ಯಾಣದ ಮೇವತ್ ನಲ್ಲಿ ನಡೆದಿದೆ.
ಮೇವತ್ ನಲ್ಲಿ ಮೈನಿಂಗ್ ಮಾಫಿಯಾ ಸಕ್ರಿಯವಾಗಿದ್ದು, ಪಚಗಾಂವ್ ಪ್ರದೇಶದ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಡಿವೈ ಎಸ್ ಪಿ ಸುರೇಂದ್ರ ಸಿಂಗ್ ಅವರ ಮೇಲೆ ದುಷ್ಕರ್ಮಿಗಳು ಟ್ರಕ್ ಹರಿಸಿ ಹಯೆಗೈದಿದ್ದಾರೆ.
ಪಚಗಾಂವ್ ನಲ್ಲಿ ಪೊಲೀಸರು ದಾಳಿ ನಡೆಸಿದ್ದ ವೇಳೆ ಅಕ್ರಮ ಮೈನಿಂಗ್ ನಡೆಯುತ್ತಿತ್ತು. ಈ ವೇಳೆ ಕಲ್ಲು ತುಂಬಿದ್ದ ಟ್ರಕ್ ನ್ನು ನಿಲ್ಲಿಸಲು ಡಿವೈಎಸ್ ಪಿ ಸುರೇಂದ್ರ ಸಿಂಗ್ ಮುಂದಾಗಿದ್ದಾರೆ. ಆದರೆ ಟ್ರಕ್ ಚಾಲಕ ಹಾಗೂ ಆತನ ಜತೆಗಿದ್ದ ಕ್ಕೆಲವರು ಟ್ರಕ್ ನಿಲ್ಲಿಸದೇ ಸುರೇಂದ್ರ ಸಿಂಗ್ ಅವರಿಗೆ ಡಿಕ್ಕಿ ಹೊಡೆದಿದ್ದು, ಸುರೇಂದ್ರ ಸಿಂಗ್ ಮೇಲೆಯೇ ಟ್ರಕ್ ಹರಿಸಿದ್ದಾರೆ. ಡಿವೈ ಎಸ್ ಪಿ ಸುರೇಂದ್ರ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಬಗ್ಗೆ ದಕ್ಷಿಣ ವಲಯ ಐಜಿಪಿ ರವಿ ಕಿರಣ್ ಮಾಹಿತಿ ನೀಡಿದ್ದು, ಅಕ್ರಮ ಗಣಿಗಾರಿಕೆ ಬಗ್ಗೆ ಮಾಹಿತಿ ಬಂದ ತಕ್ಷಣ ಸುರೇಂದ್ರ ಸಿಂಗ್ ದಾಳಿ ನಡೆಸಿದ್ದರು. ಸಮಯಸಿಗದ ಕಾರಣ ಹೆಚ್ಚಿನ ಬ್ಯಾಕ್ ಅಪ್ ಫೋರ್ಸ್ ನೊಂದಿಗೆ ತೆರಳಿರಲಿಲ್ಲ. ಹೀಗಾಗಿ ದುಷ್ಕರ್ಮಿಗಳೇ ಸುಲಭವಾಗಿ ಯಾವುದೇ ಶಸ್ತ್ರಾಸ್ತ್ರಗಳಿಲ್ಲದೇ ಡಿವೈಎಸ್ ಪಿಯನ್ನು ಹತ್ಯೆ ಮಾಡಿದ್ದಾರೆ. ಸುರೇದ್ರ ಸಿಂಗ್ ಈ ವರ್ಷ ನಿವೃತ್ತಿಯಾಗುವವರಿದ್ದರು ಎಂದು ತಿಳಿಸಿದ್ದಾರೆ.
ನೂಪುರ್ ಶರ್ಮಾಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ