ಪ್ರಗತಿವಾಹಿನಿ ಸುದ್ದಿ; ಹಾಸನ: ಚಿಕ್ಕ ವಾಹನದಲ್ಲಿ ಕರುಗಳ ಕಾಲು- ಬಾಯಿ ಕಟ್ಟಿ ನೂರು ಕರುಗಳನ್ನು ಸಾಗಿಸುತ್ತಿದ್ದ ವೇಳೆ ವಾಹನ ಪಲ್ಟಿಯಾಗಿ ಬಿದ್ದಿರುವ ಘಟನೆ ಹಾಸನ ಜಿಲ್ಲೆ ಬೇಲೂರಿನ ದ್ಯಾವಪ್ಪನ ಹಳ್ಳಿಯಲ್ಲಿ ನಡೆದಿದೆ.
ಕರುಗಳಿಗೆ ಕಾಲು, ಬಾಯಿಗಳನ್ನು ಹಗ್ಗದಿಂದ ಕಟ್ಟಿ ವಾಹನದಲ್ಲಿ ತುಂಬಿ ಸಾಗಿಸಲಾಗುತ್ತಿತ್ತು. ಉಸಿರುಗಟ್ಟಿ ಹಲವು ಕರುಗಳು ವಾಹನದಲ್ಲೇ ಸಾವನ್ನಪ್ಪಿವೆ. ಅದೇ ವಾಹನ ದ್ಯಾವಪ್ಪನ ಹಳ್ಳಿ ಬಳಿ ಹೋಗುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದಾಗಲೇ ಹಲವು ಕರುಗಳು ವಾಹನದಲ್ಲೇ ಉಸಿರುಗಟ್ಟಿ ಸಾವನ್ನಪ್ಪಿರುವುದು ಹಾಗೂ ಅಪಘಾತದಿಂದ ಇನ್ನಷ್ಟು ಕರುಗಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಶಾಸಕ ಕೆ.ಎಸ್.ಲಿಂಗೇಶ್ ಸ್ಥಳಕ್ಕೆ ದೌಡಾಯಿಸಿದ್ದು, ಉಳಿದ ಕರುಗಳನ್ನು ರಕ್ಷಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದು ಅಚಾತುರ್ಯದಿಂದ ಆದ ಪ್ರಮಾದ – ಮುರುಗೇಶ ನಿರಾಣಿ ಕ್ಷಮೆ ಯಾಚನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ