Latest

ಲಾಕ್ ಡೌನ್ ಆದೇಶ ಹೊರಡಿಸಿ ಉಲ್ಟಾ ಹೊಡೆದ ಸಚಿವ

ಪ್ರಗತಿವಾಹಿನಿ ಸುದ್ದಿ; ಹಾಸನ: ಕೊರೊನಾ ಸೋಂಕು ತಡೆಗಟ್ಟಲು ಹಾಸನ ಜಿಲ್ಲೆಯಲ್ಲಿ 4 ದಿನಗಳ ಲಾಕ್ ಡೌನ್ ಜಾರಿ ಮಾಡಿ ಆದೇಶ ಹೊರಡಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಎರಡೇ ಗಂಟೆಗಳಲ್ಲಿ ಉಲ್ಟಾ ಹೊಡೆದಿದ್ದಾರೆ.

ಸಚಿವ ಕೆ.ಗೋಪಾಲಯ್ಯ ಮಧ್ಯಾಹ್ನವಷ್ಟೇ ಜಿಲ್ಲೆಯಲ್ಲಿ ವಾರದಲ್ಲಿ ನಾಲ್ಕು ದಿನ ಲಾಕ್ ಡೌನ್ ಜಾರಿ ಮಾಡುತ್ತಿರುವುದಾಗಿ ಘೋಷಿಸಿದ್ದರು. ಅಧಿಕಾರಿಗಳ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಿದ ಸಚಿವರು ಸಂಜೆ ಲಾಕ್ ಡೌನ್ ರದ್ದು ಮಾಡಿ ಆದೇಶ ಹಿಂಪಡೆದಿದ್ದಾರೆ. ಅಲ್ಲದೇ ಜನತಾ ಕರ್ಫ್ಯೂ ಮುಂದುವರೆಯುವುದಾಗಿ ತಿಳಿಸಿದ್ದಾರೆ.

ವಾರದಲ್ಲಿ ನಾಲ್ಕುದಿನ ಲಾಕ್ ಡೌನ್

Related Articles

Back to top button