Kannada NewsKarnataka NewsPolitics

*ನಾನೇ ಸರ್ಕಾರ, ನಾನು ಹೇಳಿದಂತೆ ಕೇಳಬೇಕು*: *ನಾನು ಹೇಳಿದ್ದೇ ಫೈನಲ್ ಎಂದ ಸಚಿವ ಶಿವಲಿಂಗೇಗೌಡ*

ಪ್ರಗತಿವಾಹಿನಿ ಸುದ್ದಿ: ಹಾಸನಾಂಬ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಈ ವೇಳೆ ಹೆಚ್ಚಿನ ಬೆಲೆಗೆ ಲಡ್ಡು ಪ್ರಸಾದ ವಿತರಣೆ ಮಾಡುತ್ತಿದ್ದವರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಕಿಡಿಕಾರಿದ್ದಾರೆ.

100 ರೂ.ಗೆ ಲಾಡು ಪ್ರಸಾದ ಮಾರಾಟ ಮಾಡುತ್ತಿದ್ದವರ ವಿರುದ್ಧ ಸಚಿವ ಕೆ.ಎಂ ಶಿವಲಿಂಗೇಗೌಡ ನಾನು ಹೇಳಿದ ರೇಟಿಗೆ ಲಡ್ಡು ಮಾರಾಟ ಮಾಡಬೇಕು ಎಂದು ಗುಡುಗಿದ್ದಾರೆ.

ಲಡ್ಡು ಪ್ರಸಾದ ಮಾರಾಟ ಮಾಡುವವರ ಬಳಿ 60 ರೂ.ಗೆ 2 ಲಡ್ಡು ಕೊಡ್ಬೇಕು, ನಾನೇ ಸರ್ಕಾರ, ನಾನು ಹೇಳಿದ ಮೇಲೆ ಫೈನಲ್‌ ಎಂದು ಆಕ್ರೋಶ ಹೊರಹಾಕಿದ್ದಾರೆ.

ದೇವಾಲಯದ ಸುತ್ತಮುತ್ತ ಪರಿಶೀಲನೆ ನಡೆಸಿದ ಸಚಿವರು, 100 ರೂ.ಗೆ ಲಡ್ಡು ಮಾರಾಟ ಮಾಡುವುದನ್ನು ಗಮನಿಸಿದ್ದಾರೆ. ಈ ವೇಳೆ ಟೆಂಡರ್‌ ಪಡೆದ ಇಸ್ಕಾನ್‌ ಸಂಸ್ಥೆಗೆ ಕರೆ ಮಾಡಿ, ನಾನು ಮಿನಿಸ್ಟರ್ ಮಾತನಾಡುತ್ತಿದ್ದೇನೆ. 56.16 ರೂ.ಗೆ ಲಾಡು ಮಾರಾಟದ ಟೆಂಡರ್ ಆಗಿದೆ. 100 ರೂ.ಗೆ ಲಾಡು ಮಾರಾಟ ಮಾಡಿದ್ರೆ ಇಲ್ಲೇ ಪ್ರತಿಭಟನೆ ಮಾಡಿಸುತ್ತೇನೆ. ಜನರನ್ನು ದಂಗೆ ಎಬ್ಬಿಸುತ್ತೇನೆ. 60 ರೂ.ಗೆ ಎರಡು ಲಾಡುಗಳನ್ನು ಮಾರಾಟ ಮಾಡಬೇಕು. 1000 ರೂ. 300 ರೂ. ವಿಶೇಷ ದರ್ಶನದ ಟಿಕೆಟ್ ಪಡೆದು ದರ್ಶನ ಮಾಡಿದವರಿಗೆ ಉಚಿತವಾಗಿ ಲಾಡು ನೀಡಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ.

ಹಾಸನಾಂಬ ದೇವಿ ದರ್ಶನಕ್ಕೆ ಮೊದಲ ದಿನವೇ ಭಕ್ತರ ದಂಡು ಸಾಗರೋಪಾದಿಯಾಗಿ ಹರಿದುಬಂದಿದೆ. ಮುಂಜಾನೆ 3 ಗಂಟೆಯಿಂದಲೇ ದೇವಿ ದರ್ಶನಕ್ಕೆ ಸಹಸ್ರಾರು ಭಕ್ತರು ಸಾಲುಗಟ್ಟಿ ನಿಂತಿರುವ ದೃಶ್ಯ ಕಂದುಬಂದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button