Kannada NewsKarnataka NewsLatest

*ಪತಿ ಹಾಗೂ ಮಗನನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಿ ಕಾರಿನಲ್ಲಿ ವಿವಾಹವಾದ ಮಹಿಳೆ*

ಪ್ರಗತಿವಾಹಿನಿ ಸುದ್ದಿ: ಪತಿ ಹಾಗೂ 7 ವರ್ಷದ ಗಂಡು ಮಗನನ್ನು ಬಿಟ್ಟು ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಓಡಿ ಹೋಗಿ ಕಾರಿನಲ್ಲಿ ಮದುವೆಯಾಗಿರುವ ಘಟನೆ ನಡೆದಿದೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮುಂಡಗೋಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹರ್ಷಿತಾ ಎಂಬ ಮಹಿಳೆ ಪತಿ ಹಾಗೂ ತನ್ನ ಮಗನನ್ನು ಬಿಟ್ಟು ಪ್ರಿಯಕರನ ಜೊತೆ ಕಾರಿನಲ್ಲಿಯೇ ಮದುವೆಯಾಗಿದ್ದಾಳೆ.

ಹರ್ಷಿತಾಗೆ 2017ರಲ್ಲಿ ಹಾಸನ ತಾಲೂಕಿನ ಮುಕಂದೂರು ಗ್ರಾಮದ ಪ್ರಕಾಶ್ ಅವರೊಂದಿಗೆ ವಿವಾಹವಾಗಿತ್ತು. ಪ್ರಕಾಶ್ ಹರ್ಷಿತಾಳ ಅತ್ತೆಯ ಮಗ. ಅತ್ತೆಯ ಮಗನೊಂದಿಗೆ ಹರ್ಷಿತಾಳನ್ನು ಕುಟುಂಬದವರು ಮದುವೆ ಮಾಡಿಕೊಟ್ಟಿದ್ದರು. ದಂಪತಿಗೆ ಏಳು ವರ್ಷದ ಗಂಡು ಮಗನಿದ್ದಾನೆ. ಮಾರ್ಚ್ 30ರಂದು ಹುಷಾರಿಲ್ಲ ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋದ ಹರ್ಷಿತಾ ನಾಪತ್ತೆಯಾಗಿದ್ದಾಳೆ.

ಗಾಬರಿಯಾದ ಪತ್ನಿ ಹಾಗೂ ಪೋಷಕರು ಹರ್ಷಿತಾ ಕಾಣೆಯಾಗಿದ್ದಾಳೆ ಎಂದು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹರ್ಷಿತಾಳನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದಿದ್ದರು. ಈ ವೇಳೆ ಹರ್ಷಿತಾ ಪತಿ ಪ್ರಕಾಶ್ ಜೊತೆ ಹೋಗಲು ನಿರಾಕರಿಸಿದ್ದಾಳೆ. ತಾನು ಪ್ರಿಯಕರ ಸಚಿನ್ ಜೊತೆಗೇ ಹೋಗುವುದಾಗಿ ಹಠ ಹಿಡಿದಿದ್ದಳು. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಆಕೆಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು.

Home add -Advt

ಸಾಂತ್ವನ ಕೇಂದ್ರದಲ್ಲಿದ್ದ ಹರ್ಷಿತಾ, ಆರೋಗ್ಯ ಸರಿಯಿಲ್ಲ ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಬಂದಿದ್ದಾಳೆ. ಹೀಗೆ ಹೊರಬಂದವಳು ಪ್ರಿಯಕರ ಸಚಿನ್ ಜೊತೆ ತೆರಳಿ ಕಾರಿನಲ್ಲಿಯೇ ಮದುವೆಯಾಗಿದ್ದಳೆ. ಮಗಳ ಹುಚ್ಚಾಟಕ್ಕೆ ಹರ್ಷಿತಾ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

Back to top button