GIT add 2024-1
Kore@40
Beereshwara 33

*ಹಟ್ಟಿ ಚಿನ್ನದ ಗಣಿಯಲ್ಲಿ ಏರ್ ಬ್ಲಾಸ್ಟ್ ಆಗಿ ಅವಘಡ; 6 ಜನರಿಗೆ ಗಂಭೀರ ಗಾಯ*

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಏರ್ ಬ್ಲಾಸ್ಟ್ ಆಗಿದ್ದು, 6 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಹಟ್ಟಿ ಚಿನ್ನದ ಗಣಿಯಲ್ಲಿ ಏಕಾಏಕಿ ಏರ್ ಬ್ಲಾಸ್ಟ್ ಆಗಿದ್ದು, ಸುರಂಗ ಮಾರ್ಗದಲ್ಲಿ ಕೆಲಸ ಮಾಡುತ್ತಿದ್ದ 6 ಕಾರ್ಮಿಕರು ಗಾಯಗೊಂಡಿದದರೆ. ಓರ್ವ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ. ಗಾಯಾಳು ಕಾರ್ಮಿಕನನ್ನು ಬೆಂಗಳೂರು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

Emergency Service

ಚಿನ್ನದ ಗಣಿಯಲ್ಲಿ ಕೆಲಸ ಮಡುತ್ತಿದ್ದ ಕಾರ್ಮಿಕರಿಗೆ ಪೂರೈಸಲಾಗಿದ್ದ ಆಮ್ಲಜನಕದ ಗ್ಯಾಸ್ ಬ್ಲಾಕ್ ಆಗಿ ಸ್ಫೋಟಗೊಂಡಿದೆ. ಈ ವೇಳೆ ಉಸಿರಾಟದ ಸಮಸ್ಯೆಯಿಂದಾಗಿ ಕಾರ್ಮಿಕರು ಸುರಂಗದಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣ 6 ಜನರನ್ನು ರಕ್ಷಿಸಲಾಗಿದೆ. ಐವರನ್ನು ಹಟ್ಟಿ ಚಿನ್ನದ ಗಣಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವನ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರು ಆಸ್ಪತ್ರೆಗೆ ಕರೆತರಲಾಗಿದೆ.

Laxmi Tai add
Bottom Add3
Bottom Ad 2