Kannada NewsKarnataka News

ಹಿಂದವೀ ಸ್ವರಾಜ್ಯ ಡೋಲ್ ತಾಶಾ ಪಥಕ್ ಉದ್ಘಾಟಿಸಿದ ಹಟ್ಟಿಹೊಳಿ​

ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜಗರಣಿ ಗ್ರಾಮದಲ್ಲಿ ಹಿಂದವೀ ಸ್ವರಾಜ್ಯ ಡೋಲ್ ತಾಶಾ ಪಥಕ್ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಗುರುವಾರ ನೆರವೇರಿಸಿದರು.
​ನಮ್ಮ ದೇಶದಲ್ಲಿ ಹಲವಾರು ಬುಡಕಟ್ಟು ಜನಾಂಗಗಳಿದ್ದು, ಅವುಗಳು ತಮ್ಮದೇ ಆದ ಭಾಷೆ, ಸಂಪ್ರದಾಯಗಳನ್ನು ಹೊಂದಿವೆ. ತಮ್ಮದೇ ರೀತಿಯಲ್ಲಿ ಹಬ್ಬ ಹರಿದಿನಗಳನ್ನು ವಿಶಿಷ್ಟವಾಗಿ  ಆಚರಿಸುತ್ತವೆ.  ನಮ್ಮ ಸಂಪ್ರದಾಯಗಳನ್ನು ಆಚರಿಸುವ ಜೊತೆಗೆ ಇತರರ ಆಚರಣೆ, ಸಂಪ್ರದಾಯಗಳನ್ನೂ ಗೌರವಿಸುವುದು, ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.
​ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು,  ಪ್ರಕಾಶ ಭಾಸ್ಕಳ, ಯಲ್ಲಪ್ಪ ಬೆಳಗಾಂವ್ಕರ್, ಕಾಂಗ್ರೆಸ್ ಯುವ ಮುಖಂಡ ಮೃಣಾಲ ಹೆಬ್ಬಾಳಕರ್, ಪುಂಡಲೀಕ್ ಜಾಧವ್ ಮುಂತಾದವರು ಉಪಸ್ಥಿತರಿದ್ದರು.
https://pragati.taskdun.com/politics/panchamasali2a-reservationjayamrutyunjaya-swamiji/

Related Articles

Back to top button