*ಸ್ನಾನಕ್ಕೆಂದು ನದಿಗೆ ಇಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು*

ಪ್ರಗತಿವಾಹಿನಿ ಸುದ್ದಿ: ರಣ ಬಿಸಿಲ ಝಳಕ್ಕೆ ನದಿಯಲ್ಲಿ ಸ್ನಾನ ಮಾಡಲೆಂದು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯರಟ್ಟಿಹಳ್ಳಿ ತಾಲೂಕಿನ ಕಿರಗೆರೆ ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ಈ ಘಟನೆ ನಡೆದಿದೆ. ಅಬ್ಬಾಸ್ ನಾಸೂರ್ (52) ಮೃತ ವ್ಯಕ್ತಿ. ಅಬ್ಬಾಸ್ ಮೂಲತಃ ಹಿರೇಕೇರೂರುಕೋಡ ಗ್ರಾಮದ ನಿವಾಸಿ. ಕುಟುಂಬ ಸಮೇತ ಪಿಕ್ನಿಕ್ ಹೋಗಿದ್ದರು. ಬಿಸಿಲ ಬೇಗೆ ಇರುವುದರಿಂದ ನದಿ ನೀರಿನಲ್ಲಿ ಸ್ನಾನ ಮಾಡಲೆಂದು ಇಳಿದಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ರಟ್ಟಿಹಳ್ಳಿ ಪೊಲೀಸ್ … Continue reading *ಸ್ನಾನಕ್ಕೆಂದು ನದಿಗೆ ಇಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು*