Kannada NewsKarnataka NewsLatest

*ಸ್ನಾನಕ್ಕೆಂದು ನದಿಗೆ ಇಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು*

ಪ್ರಗತಿವಾಹಿನಿ ಸುದ್ದಿ: ರಣ ಬಿಸಿಲ ಝಳಕ್ಕೆ ನದಿಯಲ್ಲಿ ಸ್ನಾನ ಮಾಡಲೆಂದು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಹಾವೇರಿ ಜಿಲ್ಲೆಯರಟ್ಟಿಹಳ್ಳಿ ತಾಲೂಕಿನ ಕಿರಗೆರೆ ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ಈ ಘಟನೆ ನಡೆದಿದೆ. ಅಬ್ಬಾಸ್ ನಾಸೂರ್ (52) ಮೃತ ವ್ಯಕ್ತಿ. ಅಬ್ಬಾಸ್ ಮೂಲತಃ ಹಿರೇಕೇರೂರುಕೋಡ ಗ್ರಾಮದ ನಿವಾಸಿ. ಕುಟುಂಬ ಸಮೇತ ಪಿಕ್ನಿಕ್ ಹೋಗಿದ್ದರು. ಬಿಸಿಲ ಬೇಗೆ ಇರುವುದರಿಂದ ನದಿ ನೀರಿನಲ್ಲಿ ಸ್ನಾನ ಮಾಡಲೆಂದು ಇಳಿದಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ರಟ್ಟಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ನದಿಯಲ್ಲಿ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ.


Home add -Advt

Related Articles

Back to top button