Belagavi NewsBelgaum NewsCrimeKannada NewsKarnataka NewsNationalPolitics

*ಲಾರಿ-ಬೈಕ್ ನಡುವೆ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರು ಪಟ್ಟಣದ ಬೆಲ್ಲದ-ಬಾಗೇವಾಡಿ ರಸ್ತೆಯಲ್ಲಿ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸವಾನ್ನಪ್ಪಿದ್ದಾನೆ. 

ಕಬ್ಬೂರು ಪಟ್ಟಣದ ಹಿರೇಕುರಬರ ತೋಟದ ನಿವಾಸಿ ಪ್ರವೀಣ ರಾಮಪ್ಪ ಹಿರೇಕುರಬರ (35) ಸಾವನ್ನಪ್ಪಿದ ಬೈಕ್ ಸವಾರ.

Home add -Advt

ಮೃತ ಪ್ರವೀಣ ಅವರು ಪಟ್ಟಣದಿಂದ ಮನೆಗೆ  ಸಾಮಗ್ರಿಗಳನ್ನು ಖರೀದಿಸಿ ತಮ್ಮ ಬೈಕ್‌ನಲ್ಲಿ ತೋಟದ ಮನೆಗೆ ಹಿಂತಿರುಗುತ್ತಿದ್ದರು. ಅಪಘಾತ ಸಂಭವಿಸಿ ಸಾವನ್ನಪ್ಪಿದ್ದಾನೆ.‌

ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button