Belagavi NewsBelgaum NewsKannada NewsKarnataka NewsNational

*ನಾಳೆ ಬೆಳಗಾವಿಯಲ್ಲಿ ಬಂದ್ ಇಲ್ಲ: ನೈತಿಕ ಬೆಂಬಲ ಮಾತ್ರ: ಕನ್ನಡ ಸಂಘಟನೆಗಳ ನಿರ್ಧಾರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರೆ ನೀಡಲಾಗಿರುವ ‘ಕರ್ನಾಟಕ ಬಂದ್‌ಗೆ ಬೆಳಗಾವಿಯ ಕನ್ನಡಪರ ಸಂಘಟನೆಗಳು ಬೆಂಬಲ ನೀಡಲ್ಲ. ಬದಲಾಗಿ ನೈತಿಕ ಬೆಂಬಲ ನೀಡುವುದಾಗಿ ತೀರ್ಮಾನ ಮಾಡಲಾಗಿದೆ. 

ಇಂದು ಬೆಳಗಾವಿ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಕನ್ನಡ ಕ್ರಿಯಾ ಸಮಿತಿಯಿಂದ ಸಭೆ ಸೇರಲಾಗಿತ್ತು. ನಾಳಿನ ಕರ್ನಾಟಕ ಬಂದ್ ವಿಚಾರವಾಗಿ ಕೇವಲ ನೈತಿಕ ಬೆಂಬಲ ಘೋಷಣೆ ಮಾಡಲಾಗಿದೆ.

ಈ ಸಭೆಯಲ್ಲಿ ಕಿತ್ತೂರು ಕರ್ನಾಟಕ ಸೇನೆ ಸೇರಿ ಹಲವು ಸಂಘಟನೆಗಳ ಮುಖಂಡರು ಭಾಗಿಯಾಗಿದ್ರು, ಬಂದ್ ವಿಚಾರದಲ್ಲಿ ಬೆಳಗಾವಿಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗಿದ್ದು, ಬಂದ್ ಗೆ ಕೇವಲ ನೈತಿಕ ಬೆಂಬಲ ಘೋಷಣೆ ಮಾಡಲಾಗಿದೆ.

ಬೆಳಗಾವಿಗೆ ವಾಟಾಳ್ ನಾಗರಾಜ ಭೇಟಿ ವೇಳೆ ಬಂದ್ ವೇಳೆ ಮಹದಾಯಿ ವಿಚಾರ ಸೇರ್ಪಡೆ ಬಗ್ಗೆ ಭರವಸೆ ನೀಡಲಾಗಿತ್ತು. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮಹದಾಯಿ ವಿಚಾರ ಕೈಬಿಟ್ಟ ಹಿನ್ನೆಲೆ

ಬೆಳಗಾವಿಯಲಿ ಬಂದ್ ಕೇವಲ ನೈತಿಕ ಬೆಂಬಲ ನೀಡಲು ತೀರ್ಮಾನ ಮಾಡಲಾಗಿದೆ.‌ ಮಹದಾಯಿ ವಿಚಾರದಲ್ಲಿ ಪ್ರತ್ಯೇಕವಾಗಿ ಬಂದ್ ಕರೆ ನೀಡುವ ಬಗ್ಗೆ ಚರ್ಚಿಸಲಾಗಿದೆ.‌

Related Articles

Back to top button