*ವಂದೇ ಮಾತರಂ ಎರಡು ಚರಣಕ್ಕೆ ಸೀಮಿತಗೊಳಿಸಿದ್ದು ಸರಿಯಲ್ಲ: ರಾಜ್ಯ ಸರ್ಕಾರದ ವಿರುದ್ಧ ಜೋಶಿ ಗರಂ*
It is not right to limit 'Vande Mataram' to two stanzas: Joshi lashes out at the state government.

ಪ್ರಗತಿವಾಹಿನಿ ಸುದ್ದಿ: ಕರ್ನಾಟಕದಲ್ಲಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯನ್ನು ಮೊದಲ ಎರಡು ಚರಣಗಳಿಗೆ ಸೀಮಿತಗೊಳಿಸಿರುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಚಾರವನ್ನು ಸಂಸತ್ತಿನಲ್ಲಿ ಎತ್ತುವುದಾಗಿ ಅವರು ಎಕ್ಸ್ ಮೂಲಕ ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಟೀಕಿಸಿರುವ ಜೋಶಿ, ‘ವಂದೇ ಮಾತರಂ’ನ ಸಂಪೂರ್ಣ ಅಧಿಕೃತ ಆವೃತ್ತಿ ಹಾಡುವ ಕುರಿತು ಕೇಂದ್ರದ ನಿರ್ದೇಶನಗಳ ಹಿನ್ನೆಲೆಯಲ್ಲಿ ರಾಜ್ಯದ ಆದೇಶವನ್ನು ಪ್ರಶ್ನಿಸಿದ್ದಾರೆ. ಕರ್ನಾಟಕ ಸರ್ಕಾರದ ಸೆಪ್ಟೆಂಬರ್ 8ರ ಆದೇಶದ ಪ್ರಕಾರ ಕೆಲವು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ರಾಜ್ಯ ಕಾರ್ಯಕ್ರಮಗಳಲ್ಲಿ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ಸೂಚಿಸಲಾಗಿದೆ.
ಈ ನಿರ್ಧಾರದ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಸಲ್ಲಿಕೆಯಾಗಿದೆ. ರಾಜ್ಯ ಸರ್ಕಾರಕ್ಕೆ ‘ವಂದೇ ಮಾತರಂ’ನ ಗಾಯನಕ್ಕೆ ಸಂಬಂಧಿಸಿದಂತೆ ಇಂತಹ ಮಿತಿಯನ್ನು ವಿಧಿಸುವ ಅಧಿಕಾರವಿದೆಯೇ ಎಂಬ ಪ್ರಶ್ನೆಯನ್ನು ಅರ್ಜಿಯಲ್ಲಿ ಎತ್ತಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಜುಲೈ 9ರ ನಿರ್ದೇಶನವನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ, ಕಾಂಗ್ರೆಸ್ ತನ್ನ ಪಕ್ಷದ ಕಾರ್ಯಕ್ರಮಗಳಲ್ಲಿ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ನಿರ್ಧಾರವನ್ನು 1937ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಣಯದೊಂದಿಗೆ ಸಮರ್ಥಿಸಿಕೊಂಡಿದೆ. ಆ ಕಾಲದಲ್ಲಿ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಸೇರಿದಂತೆ ಸ್ವಾತಂತ್ರ್ಯ ಚಳವಳಿಯ ನಾಯಕರ ಅಭಿಪ್ರಾಯಗಳನ್ನು ಪರಿಗಣಿಸಲಾಗಿತ್ತು ಎಂದು ಕಾಂಗ್ರೆಸ್ ವಾದಿಸಿದೆ.
ಹೀಗಾಗಿ ‘ವಂದೇ ಮಾತರಂ’ನ ಎಷ್ಟು ಚರಣಗಳನ್ನು ಹಾಡಬೇಕು ಎಂಬ ವಿಚಾರ ರಾಜ್ಯ ಸರ್ಕಾರದ ಆದೇಶ, ಕೇಂದ್ರದ ನಿರ್ದೇಶನ, ನ್ಯಾಯಾಲಯದ ಅರ್ಜಿ ಹಾಗೂ ಕಾಂಗ್ರೆಸ್–ಬಿಜೆಪಿ ನಡುವಿನ ರಾಜಕೀಯ ವಾದ-ಪ್ರತಿವಾದದ ಭಾಗವಾಗಿದೆ. ಪ್ರಹ್ಲಾದ್ ಜೋಶಿ ಈ ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ.
*‘ವಂದೇ ಮಾತರಂ’ಗೆ ಕತ್ತರಿ; ಕಾಂಗ್ರೆಸ್ ವಿರುದ್ಧ ಸಂಸತ್ತಿನಲ್ಲಿ ರಣಕಹಳೆ; ಪ್ರಲ್ಹಾದ ಜೋಶಿ*
* ದೇಶವಿರೋಧಿ ಮನಸ್ಥಿತಿಯ ಕಾಂಗ್ರೆಸ್ ನಿಂದ ತುಘಲಕ್ ದರ್ಬಾರ್
* ರಾಷ್ಟ್ರಗೀತೆ ಮೇಲೇಕೆ ಕಾಂಗ್ರೆಸ್ ಗೆ ಇಷ್ಟೊಂದು ದ್ವೇಷ?
* ದೇಶದ ಹೆಮ್ಮೆಯನ್ನೇ ಬಲಿ ಕೊಡುತ್ತಿದೆ ಕಾಂಗ್ರೆಸ್; ಕೇಂದ್ರ ಸಚಿವರಿಂದ ತರಾಟೆ
ನವದೆಹಲಿ: ‘ವಂದೇ ಮಾತರಂ’ ಗೀತೆಯನ್ನು ಎರಡೇ ಚರಣಕ್ಕೆ ಕತ್ತರಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ರಣಕಹಳೆ ಮೊಳಗಿಸಲಿದ್ದೇವೆ” ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಪಕ್ಷ ದೇಶವಿರೋಧಿ ಕ್ರೂರ ಮನಸ್ಥಿತಿ ಹೊಂದಿದ್ದು, ಕರ್ನಾಟಕದಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದೆ. ಸರ್ಕಾರ ಕಾನೂನು ಬಾಹಿರವಾಗಿ ಮನಸೋ ಇಚ್ಛೆ ಫರ್ಮಾನು ಹೊರಡಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ.
ವಿಧಾನಸೌಧದಲ್ಲಿ ‘ವಂದೇ ಮಾತರಂ’ ಗೀತೆಯನ್ನು ಕಾನೂನು ಬಾಹಿರವಾಗಿ ಕತ್ತರಿಸಿ, ಕೇವಲ ಎರಡೇ ಚರಣವನ್ನು ಹಾಡಿ ದೇಶವಿರೋಧಿ ನೀತಿ ಪ್ರದರ್ಶಿಸಿದ್ದು, ಇದರ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತಲಿದ್ದೇವೆ ಎಂದು ಹೇಳಿದ್ದಾರೆ ಜೋಶಿ.
*ನಕಲಿ ದೇಶಭಕ್ತಿ ಕಳಚಿದೆ:* ಕಾಂಗ್ರೆಸ್ ತನ್ನ ನಕಲಿ ದೇಶಭಕ್ತಿಯ ಮುಖವಾಡವನ್ನು ಇಂದು ಸಂಪೂರ್ಣ ಕಳಚಿಟ್ಟಿದೆ. ‘ವಂದೇ ಮಾತರಂ’ ಅನ್ನು ಎರಡೇ ಚರಣಕ್ಕೆ ಸೀಮಿತಗೊಳಿಸಿ ಹಾಡಿದ್ದು ಅತ್ಯಂತ ಖಂಡನೀಯ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಸಚಿವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
*ಡಿಕೆಶಿ ಆಡಳಿತದಲ್ಲಿ ರಾಷ್ಟ್ರಗೀತೆಗೆ ಅಪಮಾನ:* ಡಿಕೆ ಶಿವಕುಮಾರ ಆಡಳಿತದಲ್ಲಿ ರಾಷ್ಟ್ರಗೀತೆಗೆ ಹೀಗೆ ಅಪಮಾನ ಎಸಗುವುದನ್ನು ಕನ್ನಡಿಗರು ಯಾರೂ ನಿರೀಕ್ಷಿಸಿರಲಿಲ್ಲ. ದೆಹಲಿಯ ನಕಲಿ ಕುಟುಂಬವನ್ನು ಓಲೈಸಲು ರಾಜ್ಯ ಕಾಂಗ್ರೆಸ್ಸಿಗರು ಏನೆಲ್ಲಾ ಮಾಡುತ್ತಿದ್ದಾರೆ ಎಂದು ಹರಿ ಹಾಯ್ದಿದ್ದಾರೆ.
*ಕಾಂಗ್ರೆಸ್ ಗೆ ರಾಷ್ಟ್ರಗೀತೆ ಮೇಲೇಕೆ ಇಷ್ಟು ದ್ವೇಷ:?* ಕಾಂಗ್ರೆಸ್ ಪಕ್ಷಕ್ಕೆ ನಮ್ಮ ರಾಷ್ಟ್ರಗೀತೆ ಮೇಲೇಕೆ ಇಷ್ಟು ದ್ವೇಷ? ಎಂದು ಪ್ರಶ್ನಿಸುವ ಸಚಿವರು, ರಾಷ್ಟ್ರೀಯ ಗೌರವ ರಕ್ಷಣೆಗೆಂದು ಇತ್ತೀಚಿನ ಸಂಸತ್ ಅಧಿವೇಶನದಲ್ಲಿ ಜಾರಿ ತಂದ ಕಾಯ್ದೆಗೂ ಅಪಮಾನಿಸಿದಂತಿದೆ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಎಂದು ಆಕ್ಷೇಪಿಸಿದ್ದಾರೆ.
*ದೇಶದ ಹೆಮ್ಮೆಯನ್ನೇ ಬಲಿ ಕೊಡುತ್ತಿರುವ ಕಾಂಗ್ರೆಸ್:* ರಾಜ್ಯ ಕಾಂಗ್ರೆಸ್ ಸರ್ಕಾರ ಈ ದೇಶದ ಹೆಮ್ಮೆಯನ್ನೇ ಬಲಿ ಕೊಡಲು ನಿಂತಿದೆ. ಆದರೆ, ಇಂಥ ತುಘಲಕ್ ಆದೇಶಗಳಿಂದ ಭಾರತಾಂಬೆಯ ಅಸ್ಮಿತೆಯನ್ನು ಅಳಿಸಲು ಸಾಧ್ಯವಿಲ್ಲ. ಕರ್ನಾಟಕದ ಜನತೆ ಈ ನೀಚ ಕೃತ್ಯಕ್ಕೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಸಚಿವ ಪ್ರಲ್ಹಾದ ಜೋಶಿ ಎಚ್ಚರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




