
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಳೆದ ರಾತ್ರಿ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮದ್ದೂರ ಗ್ರಾಮದಲ್ಲಿ ಭಾರಿ ಮಳೆ ಹಾಗೂ ಸಿಡಿಲಿಗೆ ರೈತ ಸಾವನ್ನಪ್ಪಿರುವ ಘಟನೆ ನಡೆದಿದೆ.
ರೈತರಾದ ಕೇದಾರಪ್ಪ ಬಸಪ್ಪ ಗುರ್ಲಹೊಸೂರ ಮತ್ತು ಭೀಮಪ್ಪ ಕೇದಾರಪ್ಪ ಗುರ್ಲಹೊಸೂರ ನಿನ್ನೆ ರಾತ್ರಿ ಲ್ಲಿ ಮೆಕ್ಕೆಜೋಳ ಮಷಿನ್ ಗೆ ಒಡೆಸಿದ್ದನ್ನು ರಾಶಿ ಕಾಯಲು ಹೋಗಿದ್ದರು.
ಈ ವೇಳೆ ಅತಿಯಾದ ಭಾರಿ ಮಳೆಯಾಗಿ ಸಿಡಿಲು ಬಡಿದು ಸ್ಥಳದಲ್ಲಿಯೇ ಕೇದಾರಪ್ಪ ಬಸಪ್ಪ ಗುರ್ಲಹೊಸೂರ (47) ಎಂಬುವರು ಸಾವನ್ನಪ್ಪಿದ್ದಾರೆ.
ಜೊತೆಯಲ್ಲಿದ್ದ ಭೀಮಪ್ಪ ಕೇದಾರಪ್ಪ ಗುರ್ಲಹೊಸೂರ ಇವರ ಸ್ಥಿತಿ ಗಂಭೀರ ವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.



