Karnataka NewsLatestPolitics

*ಹಿರಣ್ಯಾಕ್ಷನ ಪಾಪದ ಕೊಡ ತುಂಬುತ್ತಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಕಿಡಿ*

ಪ್ರಗತಿವಾಹಿನಿ ಸುದ್ದಿ: ಬಿಡದಿಯ ಬೈರಮಂಗಲದಲ್ಲಿ ಪ್ರತಿಭಟನೆ ನಡೆಸಲು ಮುಂದಾದ ರೈತರ ಮೇಲೆ ಅಮಾನುಷವಾಗಿ ದಬ್ಬಾಳಿಕೆ ನಡೆಸಿದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು; ‘ಹಿರಣ್ಯಾಕ್ಷ’ನ ಪಾಪದ ಕೊಡ ತುಂಬುತ್ತಿದೆ ಎಂದು ಗುಡುಗಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವರು; ಕರ್ನಾಟಕದಲ್ಲಿ ನಾಗರಿಕ ಸರಕಾರವಿದೆಯೋ ಅಥವಾ ರಾಕ್ಷಸ ಸರಕಾರ ಇದೆಯೋ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ತಮ್ಮ ಭೂಮಿ ಉಳಿಸಿಕೊಳ್ಳಲು ಬಿಡದಿಯ ರೈತರು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದರೆ, ಬಲಪ್ರಯೋಗದಿಂದ ಅವರನ್ನು ಹತ್ತಿಕ್ಕಲೆತ್ನಿಸಿದ ದುಷ್ಪ್ರಯತ್ನ ಖಂಡನಾರ್ಹ. ಬಿಡದಿಯ ಭೈರಮಂಗಲದಲ್ಲಿ ರೈತರ ಮೇಲೆ ಪೊಲೀಸರು ನಡೆಸಿರುವ ದಬ್ಬಾಳಿಕೆ ‘ದೈವದ್ರೋಹ’ಕ್ಕೂ ಮೀರಿದ್ದು ಎಂದು ಸಚಿವರು ಕಿಡಿಕಾರಿದ್ದಾರೆ.

ಧರಣಿ ಕೂರಲು ಪೆಂಡಾಲ್ ಹಾಕಲೆತ್ನಿಸಿದಾಗ ಅದನ್ನು ಕಿತ್ತುಕೊಂಡು ಅನ್ನದಾತರನ್ನು ಉರಿಬಿಸಿಲಿನಲ್ಲೇ ಕೂರಿಸಿದ ಪೊಲೀಸರ ವರ್ತನೆ ಅಕ್ಷಮ್ಯ. ಇಂತಹ ಕೃತ್ಯಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಬಿಡದಿ ಭೂಮಿ ‘ರಿಯಲ್ ಎಸ್ಟೇಟ್ ವ್ಯಾಪಾರಿ’ ಕಪಿಮುಷ್ಟಿಗೆ ಸಿಲುಕಿದೆ. ನೆನಪಿರಲಿ, ‘ಹಿರಣ್ಯಾಕ್ಷ’ನ ಪಾಪದ ಕೊಡ ತುಂಬುತ್ತಿದೆ ಇಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button