Latest

ಲಾರಿ ಪಲ್ಟಿ; ಸ್ಥಳದಲ್ಲೇ ಮೂವರ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಹಾವೇರಿ: ಮೆಕ್ಕೆಜೋಳ ತುಂಬಿದ ಲಾರಿ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಹೊಸರಿತ್ತಿ ಗ್ರಾಮದ ಬಳಿ ನಡೆದಿದೆ.

ಆನಂದ (35), ಮಂಜು (37) ಹಾಗೂ ಆನಂದ (33) ಮೃತರು. ಮೆಕ್ಕೆಜೋಳ ತುಂಬಿದ್ದ ಲಾರಿ ಇಚ್ಚಂಗಿ ಗ್ರಾಮದಿಂದ ಹೊಸರಿತ್ತಿ ಗ್ರಾಮಕ್ಕೆ ತೆರಳುತ್ತಿತ್ತು. ಈ ವೇಳೆ ಈ ದುರಂತ ಸಂಭವಿಸಿದೆ.

ಮೃತರು ಲಾರಿಯಲ್ಲಿದ್ದ ಮೂವರು ಹಮಾಲರಾಗಿದ್ದು, ಲಾರಿ ಪಲ್ಟಿಯಾದ ವೇಳೆ ಲಾರಿ ಕೆಳಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಜೆಸಿಬಿ ಮೂಲಕ ಲಾರಿ ಎತ್ತಿ ಮೃತದೇಹ ಹೊರ ತೆಗೆಯಲಾಗಿದೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಸೋಮವಾರದ ಕೊರೋನಾ ಮಾಹಿತಿ; ಸವದತ್ತಿಯ ವ್ಯಕ್ತಿ ಬಲಿ

Related Articles

Back to top button