Kannada NewsKarnataka NewsLatest
*ಮಹಿಳೆಯರ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚನೆ; ಮೈಕ್ರೋಫೈನಾನ್ಸ್ ಸಿಬ್ಬಂದಿ ಅರೆಸ್ಟ್; ಮ್ಯಾನೇಜರ್ ಪರಾರಿ*

ಪ್ರಗತಿವಾಹಿನಿ ಸುದ್ದಿ; ಹಾವೇರಿ: ಗ್ರಾಮೀಣ ಭಾಗದ ಮಹಿಳೆಯರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮೈಕ್ರೋಫೈನಾನ್ಸ್ ಕಂಪನಿ ಮ್ಯಾನೇಜರ್ ಹಾಗೂ ಕ್ಯಾಶಿಯರ್ ಕೋಟ್ಯಂತರ ರೂಪಾಯಿ ವಂಚಿಸಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಹಾವೇರಿಯ ಹಿರೇಕೆರೂರಿನ ಮೈಕ್ರೋಫೈನಾನ್ಸ್ ಸಂಸ್ಥೆಯ ಮ್ಯಾನೇಜರ್ ಹಾಗೂ ಕ್ಯಾಶಿಯರ್ ಮಹಿಳೆಯರ ನಕಲಿ ದಾಖಲೆ ಸೃಷಿ ಸಾಲ ಕೊಡಲಾಗಿದೆ ಎಂದು ತೋರಿಸಿ ಬರೋಬ್ಬರಿ 4,16,14000ರೂ ಹಣ ದೋಚಿದ್ದಾರೆ.
ಆದರೆ ಮೈಕ್ರೋಫೈನಾನ್ಸ್ ಪ್ರಮುಖ ಶಾಖೆಗೆ ಬೇರೊಂದು ಲೆಕ್ಕ ತೋರಿಸಿದ್ದಾರೆ. ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಮ್ಯಾನೇಜರ್ ಹಾಗೂ ಕ್ಯಾಶಿಯರ್ ವಂಚನೆ ಬಯಲಾಗಿದೆ.
ಈ ಹಿನ್ನೆಲೆಯಲ್ಲಿ ಮೈಕ್ರೋಫೈನಾನ್ಸ್ ವ್ಯವಸ್ಥಾಕರು ಹಿರೆಕೇರೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಕ್ಯಾಶಿಯರ್ ಶಿವಾನಂದಪ್ಪನನ್ನು ಬಂಧಿಸಲಾಗಿದ್ದು, ಮ್ಯಾನೇಜರ್ ಬಸವರಾಜಯ್ಯ ತಲೆಮರೆಸಿಕೊಂಡಿದ್ದಾರೆ. ಆತನಿಗಾಗಿ ಶೋಧ ನಡೆಸಲಾಗಿದೆ.