ಪ್ರಗತಿವಾಹಿನಿ ಸುದ್ದಿ; ಹಾವೇರಿ: ಹಾವೇರಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಶಿಕ್ಷಕ- ಶಿಕ್ಷಕಿಯರಿಗೆ ಸಮನ್ವಯ ಶಿಕ್ಷಣದ ಬುನಾದಿ ಕಾರ್ಯಾಗಾರ ನಡೆಯಿತು.
ಕಾರ್ಯಗಾರದಲ್ಲಿ ಹಾವೇರಿ ಜಿಲ್ಲೆಯ 7 ತಾಲೂಕುಗಳ 50 ಶಿಕ್ಷಕ/ ಶಿಕ್ಷಕಿಯರು ಭಾಗವಹಿಸಿದ್ದರು. ಡಯಟ್ ನ 3 ಜನ ಉಪನ್ಯಾಸಕರ ಉಪಸ್ಥಿತಿಯಲ್ಲಿ 6 ಜನ ವಿಷಯ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.
ಸಮನ್ವಯ ಶಿಕ್ಷಣ ಎಂದರೇನು ?, ಅದರ ಗುರಿ, ಉದ್ದೇಶ, ವ್ಯಾಪ್ತಿ, ವೈಶಿಷ್ಟತೆಗಳೇನು, ಅಂಗವಿಕಲರ ಕಾಯ್ದೆ, ಅಡೆತಡೆ ರಹಿತ ವಾತಾವರಣ, ಅಂಗವಿಕಲತೆಗೆ ಕಾರಣಗಳು, 21 ವಿಧದ ನೂನ್ಯತೆಗಳು, ಅವುಗಳ ಗುಣಲಕ್ಷಣಗಳು ಹಾಗೂ ಪರಿಹಾರೋಪಾಯಗಳು, ವಿಶೇಷ ಚೇತನರ ವಿಶಿಷ್ಟ ಸಾಧನೆ ಕುರಿತು ಕಾರ್ಯಾಗಾರದಲ್ಲಿ ಸಮಗ್ರ ಮಾಹಿತಿ ನೀಡಲಾಯಿತು.
ರಾಣೆಬೆನ್ನೂರಿನ ಅಂಧರ ಜೀವ ಬೆಳಕು ಸಂಸ್ಥೆಯ ಸಂಸ್ಥಾಪಕ ನಾಗನಗೌಡ ಬೆಳ್ಳುಳ್ಳಿ ಸಂಪನ್ಮೂಲಕ ವ್ಯಕ್ತಿಯಾಗಿ ಭಾಗವಹಿಸಿ ತಮ್ಮ ಜೀವನ ಸಾಧನೆ ಕುರಿತು ವಿವರಣೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ