
ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ – ಕೌಟುಂಬಿಕ ವ್ಯಾಜ್ಯದ ಹಿನ್ನೆಲೆಯಲ್ಲಿ ನಿವೃತ್ತ ಸೈನಿಕನೋರ್ವ ತನ್ನ ಪತ್ನಿಯನ್ನೇ ನ್ಯಾಯಾಲದ ಅವರಣದಲ್ಲಿ ಭೀಕರವಾಗಿ ಕತ್ತರಿಸಿ ಹಾಕಿದ್ದಾನೆ.
ಶಿವಾನಂದ ಅಡಕಿ ಎನ್ನುವ 36 ವರ್ಷದ ವ್ಯಕ್ತಿ ತನ್ನ ಪತ್ನಿ ಜಯಮಾಲಾ (34)ಳ ಕೈ, ಕಾಲುಗಳನ್ನು ಕತ್ತರಿಸಿದ್ದಾನೆ. ಜಯಮಾಲಾ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಸಾವು ಬದುಕಿನ ಮಧ್ಯೆ ಒದ್ದಾಡುತ್ತಿದ್ದಳು. ಪೊಲೀಸರು ಆಸ್ಪತ್ರೆಗೆ ರವಾನಿಸಿದ್ದಾರೆ.
ಶಿವಾನಂದ ಹಾಗೂ ಜಯಮಾಲಾಗೆ 8 ವರ್ಷದ ಮಗಳಿದ್ದಾಳೆ. ಅವರಿಬ್ಬರ ಮಧ್ಯೆ ಕೌಟುಂಬಿಕ ಕಲಹವಿದ್ದು, ಜಯಮಾಲಾ ಪತಿಯನ್ನು ತೊರೆದು ಹುಬ್ಬಳ್ಳಿಯ ವರೂರಿನಲ್ಲಿ ತವರು ಮನೆಯಲ್ಲಿದ್ದಳು. ಇಂದು ವ್ಯಾಜ್ಯವಿರುವ ಕಾರಣ ನ್ಯಾಯಾಲಯಕ್ಕೆ ಬಂದಿದ್ದರು.
ವಿಚಾರಣೆ ಮುಗಿದು ಹೊರಗೆ ಬರುತ್ತಿದ್ದಂತೆ ಶಿವಾನಂದ ಆಕೆಯನ್ನು ಮಾರಣಾಂತಿಕವಾಗಿ ಕತ್ತರಿಸಿ ಹಾಕಿ ಪೊಲೀಸರಿಗೆ ಶರಣಾಗಿದ್ದಾನೆ.
ಕಾವೇರುತ್ತಿದೆ ವಿಧಾನಪರಿಷತ್ ಚುನಾವಣೆ : ಹಲವು ಲೆಕ್ಕಾಚಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ