ವಿಶ್ವಾಸ ಸೊಹೋನಿ
: ಸಂಯುಕ್ತ ರಾಷ್ಟ್ರಗಳ ಒಕ್ಕ್ಕೂಟದ 11.12.2014 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಅಂತರಾಷ್ಟ್ರಿಯ ಯೋಗ ದಿನ ಜೂನ್ 21 ರಂದು ಆಚರಿಸಬೇಕೆಂದು ತಿರ್ಮಾನಿಸಲಾಯಿತು.
ಇದು 10 ನೇಯ ವರ್ಷವಾಗಿದ್ದು, ಇದರಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪಾತ್ರ ಬಹು ಮುಖ್ಯವಾಗಿದೆ. 175 ರಾಷ್ಟ್ರಗಳ ಈ ಯೋಗ ದಿನ ಸಂಬ್ರಮದಿಂದ ಆಚರಿಸಲಿದೆ. ಭಾರತ ತಪೋಭೂಮಿ, ಯೋಗಿಗಳ ತಾಣ, ಆಧ್ಯಾತ್ಮದಲ್ಲಿ ವಿಶ್ವದ ದಾರಿದೀಪವೆಂದು ಪ್ರಸಿದ್ಧವಾಗಿದೆ.
‘ಯೋಗ’ ಎನ್ನುವ ಪದ ಸಂಸ್ಕಂತದ ಪದವಾದ “ಯುಜ್” ಧಾತುವುನಿಂದ ಹುಟ್ಟಿದೆ. “ಯುಜ್” ಎಂದರೆ ಜೋಡಿಸು, ಕೂಡಿಸು, ಸಂಬಂಧಿಸು. ಇದರ ಅರ್ಥ ‘ಸಂಬಂಧ’ ಅಥವಾ ಒಕ್ಕೂಟವಾಗಿದೆ. ಪತಂಜಲಿ ಮಹರ್ಷಿಗಳ ಪ್ರಕಾರ, ‘ಯೋಗಃಚಿತ್ತವೃತ್ತಿ ನಿರೋಧಃ’ ಯೋಗವೆಂದರೆ ಚಿತ್ತದ ಚಾಂಚಲ್ಯವೃತ್ತಿಗಳನ್ನು ನಿರೋಧಿಸುವುದು.”ವಸಿಷ್ಠ ಮಹರ್ಷಿಗಳು “ಮನ ಪ್ರಶಮನೋಪಾಯಃ ಯೋಗಃ ಇತಿ ಅಬಿಧೀಯತೆ” ಮನಸ್ಸನ್ನು ಪ್ರಶಾಂತಗೊಳಿಸುವ ಸುಂದರ ಉಪಾಯವೇ ಯೋಗವೆಂದು ಹೆಳುತ್ತಾರೆ.“ಯೋಗಃ ಸಮತ್ವಂ ಉಚ್ಚತೇ’ ಯೋಗವೆಂದರೆ ಕಾರ್ಯ ತತ್ಪರತೆಯಲ್ಲಿ ಸಮಭಾವ, ಸಮಚಿತ್ತವಾಗಿರುವುದು. ಸ್ತುತಿ-ನಿಂದೆ, ಮಾನ-ಅಪಮಾನ, ಸುಖ-ದುಃಖ, ನೋವು-ನಲಿವು, ಮುಂತಾದ ದ್ವಂದ್ವ ಜೀವನದಲ್ಲಿ ಸಮಭಾವವನ್ನು ಹೊಂದುವುದೇ ಯೋಗವೆಂದು ಭಗವದ್ಗೀತೆ ಹೇಳುತ್ತದೆ.
ಯೋಗವೆಂದರೆ ಕೆಲವರು ವರ್ಣಿಸುವಂತೆ ಪ್ರಾಣಾಯಾಮ, ಶಿರ್ಷಾಸನ, ಸರ್ವಾಂಗಾಸನ ಇತ್ಯಾದಿ ಯಾವದೇ ತರಹದ ಅಂಗಸಾಧನೆ ಅರ್ಥಾತ್ ಶರೀರ ಸಾಧನೆಯಾಗಿರದೆ, ಯೋಗವು ಆತ್ಮನ ಚಂಚಲ ಮನಸ್ಸನ್ನು ಏಕಾಗ್ರಗೊಳಿಸಬಲ್ಲ ಮನೋವ್ಯಾಯಾಮವಾಗಿದೆ. ಅದೇನೆ ಇರಲಿ ಯೋಗ ಎಂದರೆ ಸರ್ವ ಮನೋವ್ಯಾಪಾರಗಳ ಮೇಲೆ ಪ್ರಭುತ್ವವನ್ನು ಸ್ಥಾಪಿಸುವುದು.
ವರ್ತಮಾನ ಸಮಯದಲ್ಲಿ ಯೋಗದಲ್ಲಿ ಹಠಯೋಗ, ಸನ್ಯಾಸಯೋಗ, ಭಕ್ತಿಯೋಗ, ಕರ್ಮಯೋಗ, ಜ್ಞಾನಯೋಗ, ರಾಜಯೋಗ, ಶುಭಯೋಗ, ಲಾಭಯೋಗ, ಯೋಗಾ-ಯೋಗ ಮುಂತಾದ ಅನೇಕ ಪ್ರಕಾರಗಳು ಇವೆ.
ಎಲ್ಲ್ಲ ವಿಜ್ಞಾನಗಳಿಗಿಂತ ವೈಪರಿತ್ಯವಾಗಿ ಇನ್ನೊಂದು ವಿಜ್ಞಾನವಿದೆ ಅದು ಯೋಗವಿಜ್ಞಾನ. ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಇದನ್ನು ಪ್ರಾಯೋಗಿಕವಾಗಿ ಕಲಿಸಲಾಗುತ್ತದೆ. ಈ ಸಂಸ್ಥೆಯಲ್ಲಿ ರಾಜಯೋಗ ಶಿಕ್ಷಣ ಮತ್ತು ಸಂಶೋಧನೆ ಪ್ರತಿಷ್ಠಾನ ಎಂಬ ಅಂಗಸಂಸ್ಥೆ ಕಾರ್ಯಗತವಾಗಿದೆ.
ಇಲ್ಲಿ ಧರ್ಮ, ಜಾತಿ, ಮತ, ವಯಸ್ಸು. ವರ್ಣ ಭೇದವಿಲ್ಲದೆ ಸರ್ವರಿಗೂ ಯೋಗ ಶಿಕ್ಷಣ ಉಚಿತವಾಗಿ ಕಲಿಸಲಾಗುತ್ತದೆ. ಈ ಯೋಗವಿಜ್ಞಾನವು ಮನಸ್ಸು, ಬುದ್ದಿ, ಸಂಸ್ಕಾರ, ಸ್ವಭಾವ, ವ್ಯವಹಾರ ಚಾರಿತ್ರ್ಯ ಇತ್ಯಾದಿಗಳಿಗೆ ಸಂಬಂಧಿಸಿದೆ. ಇಲ್ಲಿ ಆತ್ಮ ಮತ್ತು ಪರಮಾತ್ಮನ ನಡುವೆ ಸರ್ವಪ್ರಕಾರದ ಸಂಬಂಧವು ಹೇಗೆ ಜೋಡಿಸಬೇಕು ಎಂಬುದನ್ನು ತಿಳಿಸಲಾಗುತ್ತದೆ. ಈ ಸಂಬಂಧಗಳಲ್ಲಿ ತಂದೆ, ಶಿಕ್ಷಕ, ಗುರುವಿನ ಸಂಬಂಧ ಅತಿ ಮುಖ್ಯ. ಅತ್ಮನಾಗಿ ಪರಮಾತ್ಮನ ಜೋತೆ ಮನನ, ಚಿಂತನೆ, ಮೀಲನ ಮಾಡಿದಾಗ ಯೋಗಿಯು ಮಗ್ನ ಅವಸ್ಥೆಗೆ ತಲುಪುತ್ತಾನೆ. ಸ್ವಯಂ ಪರಮಾತ್ಮನೇ ಕಲಿಸುವ ರಾಜಯೋಗವು ಅತ್ಯಂತ ಸರಳ ಹಾಗೂ ಸಹಜವಾಗಿದೆ. ಇದರಲ್ಲಿ ಮಾನವನ ಪ್ರವೃತ್ತಿಗಳ ಮಾರ್ಗಾಂತರೀಕರಣ ಹಾಗೂ ಶುದ್ಧೀಕರಣ ಮಾಡಿ ಅವನ ವ್ಯವಹಾರ ಮತ್ತು ಆಚಾರ ಸುಧಾರಿಸಿ ಅವನ ಸಂಸ್ಕಾರಗಳನ್ನು ಸತೋಪ್ರಧಾನ ಮಾಡಿ ಅವನನ್ನು ದೇವತಾ ಸಮಾನ ಮಾಡುತ್ತದೆ. ಯೋಗರೂಪಿ ಈ ವಿಜ್ಞಾನ ಮನುಷ್ಯನ ಆವೇಗಗಳನ್ನು ನಿಯಂತ್ರಣ ಮಾಡುತ್ತದೆ ಮತ್ತು ಅವನ ವಿಚಾರಗಳನ್ನು ವ್ಯವಸ್ಥಿತ ಹಾಗೂ ಸುರಳಿತಗೊಳಿಸುತ್ತದೆ. ಈ ವಿಜ್ಞಾನದಿಂದ ವ್ಯಕ್ತಿಯ ಮಾನಸಿಕ ಏಕಾಗ್ರತಾ ಶಕ್ತಿಯು ಹೆಚ್ಚುತ್ತದೆ. ಮತ್ತ್ತು ಅವನಿಗೆ ಒಂದು ತರಹದ ಶಾಶ್ವತ ಶಾಂತತೆಯ ಅನುಭವ ಆಗುತ್ತಿರುತ್ತದೆ. ಅಲ್ಲದೆ ಪರಮಾತ್ಮನ ದಿವ್ಯಗುಣಗಳಾದ ಶಾಂತಿ, ಪವಿತ್ರತೆ, ಆನಂದ, ದಯಾ, ಸುಖ, ಪ್ರೇಮ, ಮುಂತಾದವುಗಳ,ಅನುಭವ ಮಾಡಿಸುತ್ತದೆ. ಅವನ ವ್ಯವಹಾರದಲ್ಲಿ ಪರಿವರ್ತನೆ ಬಂದ ಕಾರಣ ಅನ್ಯರ ಜೊತೆಯಲ್ಲಿ ಅವನ ಮನಸ್ತಾಪ, ದ್ವೇಷ, ಈರ್ಷೆ, ಕ್ರೋಧ ಉತ್ಪನ್ನಗೊಳ್ಳುವುದಿಲ್ಲ. ಅವನ ಮನದಲ್ಲಿ ಆವೇಗಗಳ ಜ್ವಾಲಾಮುಖಿ ಏಳುವುದಿಲ್ಲ. ಮಾನಸಿಕ ಚಿಂತೆ ಇರುವುದಿಲ್ಲ. ಆದರೆ ಏಕರಸ ಅವಸ್ಥೆ ಅಥವಾ ಆನಂದದ ಅವಸ್ಥೆಯಲ್ಲಿ ಸ್ಥಿತನಾಗಿರುತ್ತಾನೆ.
ಸಹಜರಾಜಯೋಗದಿಂದಾಗುವ ಆರೋಗ್ಯದ ಲಾಭಗಳು
1) ಯೋಗಾವಸ್ಥೆಯಲ್ಲಿ ಶ್ವಾಸೋಚ್ಛ್ವಾಸ ನಿಧಾನವಾಗಿ ನಡೆಯುವುದುರಿಂದ ಯೋಗಿಯು ವಿಶ್ರಾಂತಿ ಹಾಗೂ ನೆಮ್ಮದಿ ಅನುಭವ ಪಡೆಯುವನು.
2) ಯೋಗಾವಸ್ಥೆಯಲ್ಲ್ಲಿ ಹೃದಯದಲ್ಲಿ ರಕ್ತ ಹೊಮ್ಮುವಿಕೆ ನಿಯಮಿತವಾಗಿ ನಿರ್ದಿಷ್ಟವಾಗಿ ಕಡಿಮೆಯಾಗುವುದರಿಂದ ಹೃದಯಕ್ಕೆ ಸಾಕಷ್ಟು ವಿಶ್ರಾಂತಿ ದೊರೆಯುತ್ತದೆ.
3) ಯೋಗಾವಸ್ಥೆಯಲ್ಲಿ ಯೋಗಿಯ ಶರೀರದಲ್ಲಿ ಸಂಚರಿಸುವ ರಕ್ತದಲ್ಲಿ ಲ್ಯಾಕ್ಟಿಕ್ ಆಮ್ಲದ ಅಂಶವು ಶೀಘ್ರವಾಗಿ ಕೆಳಮಟ್ಟಕ್ಕೆ ಬರುವುದರಿಂದ ಸಂಪೂರ್ಣ ಶಾಂತಿಯ ಅನುಭವವಾಗುವುದಲ್ಲದೆ ಎಲ್ಲಾ ಪ್ರಕಾರದ ಉದ್ವೇಗ ಹಾಗೂ ನಿರುತ್ಸಾಹದಿಂದ ಮುಕ್ತಿ ಲಭಿಸಿ ನರಮಂಡಲಕ್ಕೆ ಶಕ್ತಿಯು ದೊರೆಯುವದಲ್ಲದೆ ಯಾವುದೇ ತರಹದ ನರಮಂಡಲ ಸಂಬಂಧಿಸಿದ ರೋಗ ನಿವಾರಣೆಯಾಗುತ್ತದೆ.
4) ಯೋಗಾವಸ್ಥೆಯಲ್ಲಿ ಮಾನಸಿಕ ಉದ್ವೇಗ ದೂರವಾಗುವುದರಿಂದ ಮಾನವನ ತ್ವಚೆಯಲ್ಲಿ ಅಸಾಧಾರಣ ರೋಗ ನಿರೋಧಕಶಕ್ತಿಯು ಪ್ರಪುಲ್ಲಿತವಾಗುವುದರಿಂದ ಯೋಗಿಯು ಉಲ್ಲಾಸಭರಿತನಾಗುವನು.
5) ಹೃದಯವಿಕಾರ, ರಕ್ತದೊತ್ತಡ. ಮಾನಸಿಕ ಅಶಾಂತಿ, ಅರೆಹುಚ್ಚು, ಕ್ರೋಧ, ಕಾಮ, ಮಾನಸಿಕ ಭಯ, ಅಸ್ತವ್ಯಸ್ತತೆಯಿಂದ ಉಂಟಾದ ರೋಗಗಳೂ ಸಹ ಯೋಗದಿಂದ ಓಡಿಹೋಗುತ್ತವೆ.
6) ಯೋಗ ವಿಜ್ಞಾನವು ಮನುಷ್ಯನ ಆವೇಶ(ಎಮೋಷನ್) ಗಳನ್ನು ನಿಯಂತ್ರಿಸಿ ಅವನ ವಿಚಾರಗಳನ್ನು ವ್ಯವಸ್ಥಿತ ಹಾಗೂ ಸ್ಪಷ್ಟಪಡಿಸುತ್ತದೆ.
7) ಯೋಗದ ಫಲವಾಗಿ ನಾವು ಗಹನ ಶಾಂತಿಯ ಅನುಭವ ಮಾಡುತ್ತೇವೆ, ಆಗ ಕೊರ್ಟಿಕೋಸ್ಟಿರಾಯಿ ಗ್ರಂಥಿಯ ಅಂತಃಸ್ರಾವದ ಪ್ರಮಾಣ ಕಡಿಮೆಯಾಗಿ ಆರೋಗ್ಯಕ್ಕೆ ಅತ್ಯಂತ ಸಹಾಯಕಾರಿಯಾಗುತ್ತದೆ. ಅದು ನಮಗೆ ಪೆಪ್ಟಿಕ್ ಅಲ್ಸರ್, ರಕ್ತದ ಒತ್ತಡ. ಮಧುಮೇಹದಂತಹ ರೋಗಗಳಿಂದ ದೂರವಿಡುತ್ತದೆ. ಅಲ್ಲದೇ ರೋಗ ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ.
8) ವೈಜ್ಞಾನಿಕವಾಗಿ ಹೇಳುವುದಾದರೆ ಯೋಗಿಯು ಏಕರಸತೆ ಮತ್ತು ಅಂತರ್ಮುಖತೆ ಹಾಗೂ ಹರ್ಷಿತಮುಖತೆಯ ಸ್ಥಿತಿಯಲ್ಲಿ ಸದಾಕಾಲಕ್ಕೆ ಇರುವುದರಿಂದ ಯೋಗಿಯ ಮಾನಸಿಕ ಹಾಗೂ ಶಾರೀರಿಕ ಕ್ರಿಯೆಗಳಲ್ಲಿ ಅಸಾಧಾರಣ ಬದಲಾವಣೆಗಳಾಗಿ ನಿರೋಗಿ, ಧೀರ್ಘಾಯುವಾಗಿ ತೃಪ್ತಿಮಯ ಜೀವನವನ್ನು ಪಡೆಯುವನು.
9) ದುಃಖ, ರೋಗ, ಅಧೈರ್ಯ, ಆಸೆ, ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳಾದ ಎಲ್ಲಾ ಮನೋರೋಗಗಳನ್ನು ಶಾಶ್ವತವಾಗಿ ನಿರ್ಮೂಲನ ಮಾಡಿ ಶುದ್ಧ ಸಂಕಲ್ಪದಿಂದ ಸದಾ ಇರಲು ಅತಿ ಸುಲಭವಾದ ಏಕೈಕ ಮಾರ್ಗವೇ ಸಹಜ ರಾಜಯೋಗವಾಗಿದೆ.
10) ಯೋಗದಿಂದ ಯೋಗಿಯು ಅತಿನಿದ್ದೆ, ಆಲಸ್ಯ, ಭಯ, ವ್ಯಕ್ತಿದ್ವೇಷ, ಜಾತಿ, ಮತ, ಲಿಂಗಭೇದ, ವಯೋಭೇದಗಳನ್ನು ನಿರ್ಮೂಲಮಾಡಿ ಪ್ರೇಮ, ದಯೆ, ಕರುಣೆ, ಪವಿತ್ರತೆಯಿಂದ ಕೂಡಿ ಕಮಲಪುಷ್ಪದಂತೆ ಅನಾಸಕ್ತನಾಗಿ ಇರಬಲ್ಲನು.
ವಿಶ್ವ ಆರೋಗ್ಯ ಸಂಸ್ಥೆಯು ‘ಸಂಪೂರ್ಣ ಶಾರೀರಿಕ, ಮಾನಸಿಕ, ಸಾಮಾಜಿಕ, ಆರೋಗ್ಯವೆ ಆರೋಗ್ಯವೆಂದೂ ಸಾರಿದೆ ಕೇವಲ ರೋಗಗಳಿಲ್ಲದಿರುವಿಕೆ ಪರಿಪೂರ್ಣ ಆರೋಗ್ಯವಲ್ಲ’ ಎಂದು ವ್ಯಾಖ್ಯಾನಿಸಿದೆ. ಯೋಗದಿಂದ ಆರೋಗ್ಯ ಭಾಗ್ಯ ಪಡೆಯುವುದು ಸಹಜವಾಗಿದೆ. ಬ್ರಹ್ಮಾಕುಮಾರಿ ಸಂಸ್ಥೆಯು ಈ ವರ್ಷದ ಧ್ಯೆಯ ವಾಕ್ಯ “ಸ್ವಚ್ಛ ಮತ್ತು ಆರೋಗ್ಯಕರ ಸಮಾಜಕ್ಕಾಗಿ ಆಧ್ಯಾತ್ಮಿಕ ಸಶಕ್ತಿಕರಣ” ಇದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ, ಯೋಗ ಸಪ್ತಾಹದ ಅಂಗವಾಗಿ ಅನೇಕ ಕಾರ್ಯಯೋಜನೆಗಳನ್ನು ರೂಪಿಸಲಾಗಿದೆ. ಅದರಲ್ಲಿ ಮುಖ್ಯವಾಗಿ ಉಚಿತ ಯೊಗಾಸನ ಶಿಬಿರಗಳು, ರಾಜಯೋಗ ಮತ್ತು ಸಂಪುರ್ಣ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಮುಂತದವು ಸೆರಿದೆ.
ಜೂನ್ 21 ರಂದು ದೇಶ ವಿದೇಶಗಳಲ್ಲಿರುವ ಅನೆಕ ಶಾಖೆಗಳಲ್ಲಿ ಭಾರತ ಸರಕಾರದ ಆಯುಷ ಮಂತ್ರಾಲಯದ ಸಹಯೋಗದಿಂದ ಬೆಳ್ಳಿಗ್ಗೆ 7 ರಿಂದ 7.45 ಪ್ರೋಟೊಕಾಲ ಮುಲಕ ಆಟದ ಮೈದಾನಗಳಲ್ಲಿ 10.000 ದಿಂದ 1 ಲಕ್ಷದ ಜನರಿಗೆ ಕಾರ್ಯಕ್ರಮ ಆಯೊಜಿಸಲಾಗಿದೆ. ಇದರಲ್ಲಿ ಅನೇಕ ಸಂಘ ಸಂಸ್ಥೆಗಳು, ಶಾಲಾ ಕಾಲೆಜಗಳು ಸೆರ್ಪಡೆ ಆಗುಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ