Belagavi NewsBelgaum NewsKannada NewsKarnataka News

ಹೃದಯಾಘಾತ: ಗ್ರಾಪಂ ಉಪಾಧ್ಯಕ್ಷ ನಿಧನ

Home add -Advt

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಮಾರಿಹಾಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಉಪಾಧ್ಯಕ್ಷ ತೌಸಿಫ್ ಫನಿಬಂದ್ ಹೃದಯಾಘಾತದಿಂದ ಗುರುವಾರ ಸಂಜೆ ನಿಧನರಾಗಿದ್ದಾರೆ. ಅವರಿಗೆ 34 ವರ್ಷ ವಯಸ್ಸಾಗಿತ್ತು.

ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಅವರಿಗೆ ಗುರುವಾರ ಸಂಜೆ ತೀವ್ರ ಹೃದಯಾಘಾತವಾಯಿತು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕುಳಿಯಲಿಲ್ಲ.

ಅವರಿಗೆ ತಂದೆ, ತಾಯಿ, ಸಹೋದರ, ಇಬ್ಬರು ಸಹೋದರಿಯರು, ಪತ್ನಿ, ಮಗ ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. 4 ದಿನಗಳ ಹಿಂದಷ್ಟೆ ಅವರ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಶುಕ್ರವಾರ ಬೆಳಗ್ಗೆ ಅವರ ಅಂತ್ಯಕ್ರಿಯೆ ನಡೆಯಲಿದೆ.

Related Articles

Back to top button