
ಪ್ರಗತಿವಾಹಿನಿ ಸುದ್ದಿ: ನಾಲ್ಕನೇ ತರಗತಿ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಚಾಮರಾಜನಗರದ ಶಾಲೆಯಲ್ಲಿ ನಡೆದಿದೆ.
ಉಲ್ಲಾಸ್ ಮೃತ ವಿದ್ಯಾರ್ಥಿ. ಬೇಗೂರು ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ ಉಲ್ಲಾಸ್ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಕುಲಗಾಣ ಗ್ರಾಮದ ಮೂರ್ತಿ ಹಾಗೂ ಮಹೇಶ್ವರಿ ದಂಪತಿಯ ಪುತ್ರ ಉಲ್ಲಾಸ್ ಆರೋಗ್ಯವಾಗಿಯೇ ಇದ್ದ. ಆದರೆ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.