Latest

ಮುಂಬೈನಲ್ಲಿ ಬಿಸಿ ಗಾಳಿ ಅಲೆ; ಎಚ್ಚರಿಕೆ ಸಂದೇಶ ರವಾನಿಸಿದ IMD

ಪ್ರಗತಿವಾಹಿನಿ ಸುದ್ದಿ, ಮುಂಬೈ: ಎರಡು ಹವಾಮಾನ ಕೇಂದ್ರಗಳು ನಗರದಲ್ಲಿ 37 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನವನ್ನು ದಾಖಲಿಸಿದ ನಂತರ ಭಾರತೀಯ ಹವಾಮಾನ ಇಲಾಖೆ (IMD) ಶನಿವಾರ ಮುಂಬೈಯಲ್ಲಿ ಉಷ್ಣ ಅಲೆಯ ಬಗೆಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

ಮುಂಬೈ ಸೇರಿದಂತೆ ಪಶ್ಚಿಮ ಕರಾವಳಿ ಪ್ರದೇಶಕ್ಕೆ ಭಾನುವಾರವೂ ಬಿಸಿಗಾಳಿ ಬೀಸುವ ಬಗ್ಗೆ ಮಾಹಿತಿ ರವಾನಿಸಿದೆ.

ಶನಿವಾರ ಮಧ್ಯಾಹ್ನ ಸಾಂತಾಕ್ರೂಜ್ ವೀಕ್ಷಣಾಲಯ 38.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಿಸಿದರೆ, ಕೊಲಾಬಾ ವೀಕ್ಷಣಾಲಯ 37.4 ಡಿಗ್ರಿ ಸೆಲ್ಸಿಯಸ್ ದಾಖಲಿಸಿದೆ. ಇವೆರಡೂ ಸಾಮಾನ್ಯಕ್ಕಿಂತ ಆರು ಡಿಗ್ರಿಗಳಷ್ಟು ಹೆಚ್ಚಿರುವುದು ಆತಂಕಕ್ಕೆ ಎಡೆ ಮಾಡಿದೆ.

Home add -Advt
https://pragati.taskdun.com/assault-on-customer-by-hotel-staff-near-belgaum-file-complaint/
https://pragati.taskdun.com/may-your-blessings-be-upon-the-public-spirited-mlas-chief-minister-basavaraja-bommai/
https://pragati.taskdun.com/let-the-people-decide-who-gets-mysore-road-credit-chief-minister-basavaraja-bommai/

Related Articles

Back to top button