*ಮುಂದಿನ ನಾಲ್ಕು ದಿನ ಮತ್ತೆ ಭರ್ಜರಿ ಮಳೆ: ಎಚ್ಚರಿಕೆಯಿಂದಿರಿ*
ಪ್ರಗತಿವಾಹಿನಿ ಸುದ್ದಿ: ಮುಂಗಾರು ಮಳೆಯ ಮೋಡಗಳು ಮುಂದಿನ 4 ದಿನಗಳ ಕಾಲ ಅಂದ್ರೆ 116 ಗಂಟೆಗಳ ಕಾಲ ಕರ್ನಾಟಕದಲ್ಲಿ ಘೋರ ಅನಾಹುತ ಸೃಷ್ಟಿ ಮಾಡಲು ಸಜ್ಜಾಗಿವೆ ಎನ್ನಲಾಗಿದೆ. ಹಾಗಾದ್ರೆ ಭರ್ಜರಿಯಾಗಿ ಮಳೆ ಬೀಳಲಿರುವ ಜಿಲ್ಲಾಗಳಾವವು?
ಕರ್ನಾಟಕದ ಮಲೆನಾಡು ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು, ಹಾಸನದ ಕೆಲವು ಭಾಗ, ಕರಾವಳಿ ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿದ್ದ ಮಳೆಯ ಆರ್ಭಟ ಇದೀಗ ಕರ್ನಾಟಕದ ಒಳ ಭಾಗಗಳಿಗೂ ಆವರಿಸಲು ಸಜ್ಜಾಗಿದೆ. ಅದರಲ್ಲೂ ಮುಂದಿನ 4 ದಿನಗಳ ಕಾಲ ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ನೈರುತ್ಯ ಮುಂಗಾರು ಮಳೆ 2 ವಾರದ ನಂತರ ಮತ್ತೆ ಚುರುಕಾಗಿದೆ. ಹೀಗೆ ಕರ್ನಾಟಕದ ಒಳನಾಡಿನಲ್ಲಿ ಮುಂದಿನ 4 ದಿನ ಭಾರಿ ಮಳೆ ಬೀಳಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಅಲ್ಲದೆ ಗುಡುಗು ಮತ್ತು ಸಿಡಿಲು ಸಹಿತ ಮಳೆಯಿಂದ ರಕ್ಷಿಸಿಕೊಳ್ಳಲು ಎಚ್ಚರಿಕೆಯ ವಹಿಸುವಂತೆ ಸೂಚಿಸಲಾಗಿದೆ. ಹಾಗೂ ಉತ್ತರ ಒಳನಾಡಲ್ಲಿ ಇಂದಿನಿಂದ ವ್ಯಾಪಕ ಮಳೆ ಬೀಳುವ ಮುನ್ಸೂಚನೆ ನೀಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ