*ಬೆಳಗಾವಿಯಲ್ಲಿ ಸುರಿದ ಭಾರಿ ಮಳೆಗೆ ಜನ ಹೈರಾಣು: ಜಲಾವೃತವಾದ ರಸ್ತೆಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾತ್ರಿ ಆದ್ರೆ ಚಳಿ, ದಿನ ಬೆಳಗಾದ್ರೆ ಶಕೆ, ಈ ಮದ್ಯೆ ಇಂದು ಧಿಡಿರನೆ ಮಳೆಯಾಗಿದ್ದು ಕುಂದಾನಗರಿ ಬೆಳಗಾವಿ ಜನರನ್ನು ಫುಲ್ ಹೈರಾಣು ಮಾಡಿದೆ.
ಹೌದು.. ಬೆಳಗಾವಿ ನಗರದಲ್ಲಿ ಇಂದು ಸಂಜೆ ಎರಡು ಗಂಟೆಗೂ ಹೆಚ್ಚು ಮಳೆಯಾಗಿದ್ದು ಜನ, ವಾಹನ ಸವಾರರು ಪರದಾಡಿದ್ದಾರೆ. ಬೆಳಗಾವಿ ನಗರ ಸೇರಿದಂತೆ ವಿವಧೆಡೆ ಸುರಿದ ಹೊಸ ವರ್ಷದ ಮೊದಲ ಮಳೆಯಾಗಿದೆ.
ಬೆಳಗಾವಿ ಚೆನ್ನಮ್ಮ ವೃತ್ತ, ಪೋರ್ಟ್ ರೋಡ್, ಗಣಪತಿ ಗಲ್ಲಿ ಶನಿವಾರ ಕೂಟ ಮಾರಿಕಟ್ಟೆಯಲ್ಲಿ ಸುರಿದ ಮಳೆಯಿಂದ ವ್ಯಾಪಾರ ವಹಿವಾಟು ಅಸ್ತವ್ಯಸ್ತವಾಗಿತ್ತು. ಅಜಮ್ ನಗರ, ವೈಭವ ನಗರ, ಶಾಹು ನಗರ, ಕಾಕತಿ-ಹೊನಗಾ, ಹನುಮಾ ನಗರ ಸೇರಿದಂತೆ ವಿವಿದೆಡೆ ಸುರಿದ ಮಳೆಯಿಂದ ಶಾಲಾ ಮಕ್ಕಳು, ಕಚೇರಿಗೆ ತೆರಳಿದ ಜನರ ಮಳೆಯಲ್ಲೆ ತೋಯ್ದು ಮನೆಗೆ ವಾಪಸ್ ಆಗುವಂತಾಯಿತು.
ಇನ್ನೊಂದು ಕಡೆ ಭಾರಿ ಮೇಳೆಯಿಂದ ಚೆನ್ನಮ್ಮ ವೃತ್ತದಲ್ಲಿ ರಸ್ತೆ ಜಲಾವೃತಗೊಂಡು ವಾಹನ ಸವಾರರಿಗೆ ತೊಂದರೆ ಉಂಟಾಯಿತು.
ಸಂಕ್ರಾಂತಿ ಹಬ್ಬದ ಮುನ್ನಾ ದಿನ ಭಾರೀ ಮಳೆ ಆಗಿದ್ದು, ಕೆಲವರು ಖುಷಿ ಪಟ್ಟರೆ, ಇನ್ನೂ ಹಲವರು ತೊಂದರೆ ಅನುಭವಿಸಿದರು.




