ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ 3 ಜನರಿಗೆ ಕೊರೋನಾ ದೃಢಪಟ್ಟಿದೆ ಎನ್ನುವ ವದಂತಿ ದಟ್ಟವಾಗಿ ಹರಡಿದೆ. ಸಮಾಜಿಕ ಜಾಲತಾಣಗಳಿಂದ ಹಿಡಿದು ಗಲ್ಲಿಗಲ್ಲಿಗಳಲ್ಲಿ ಜನರು ಇದನ್ನೇ ಮಾತನಾಡುತ್ತಿದ್ದಾರೆ. ಆದರೆ ಜಿಲ್ಲಾಡಳಿತ ಪಾಸಿಟಿವ್ ಬಂದಿರುವುದನ್ನು ಈವರೆಗೂ ದೃಢಪಡಿಸಿಲ್ಲ.
ಜಿಲ್ಲೆಯಿಂದ ಕಳುಹಿಸಲಾಗಿದ್ದ ಎಲ್ಲ 33 ವರದಿಗಳೂ ನೆಗೆಟಿವ್ ಬಂದಿದೆ ಎಂದು ನಿನ್ನೆ ಸಂಜೆ ಜಿಲ್ಲಾಧಿಕಾರಿಗಳು ತಿಳಿಸಿದ್ದರು.
ಬೆಳಗಾವಿ ನಗರದಲ್ಲಿ ಶುಕ್ರವಾರ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದೆ. ಎಲ್ಲೆಂದರಲ್ಲಿ ವಾಹನಗಳನ್ನು ತಪಾಸಣೆಗೊಳಿಸಲಾಗುತ್ತಿದೆ. ಹಲವಾರು ಮುಖ್ಯ ರಸ್ತೆಗಳನ್ನೂ ಬಂದ್ ಮಾಡಲಾಗಿದೆ.
ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ, ಯಾರನ್ನೂ ಬಿಡಬೇಡಿ ಎಂದಿದ್ದಾರೆ. ಆರೋಗ್ಯ ಸಮಸ್ಯೆ ಇದ್ದವರು ಅಂಬುಲೆನ್ಸ್ ಮೂಲಕ ಹೋಗಲಿ ಎಂದಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಎಂದಿಗಿಂತ ಇಂದು ಬಂದೋಬಸ್ತ್ ಹೆಚ್ಚಾಗಿದೆ.
ವದಂತಿ ಹರಡುತ್ತಿರುವುದಕ್ಕೂ ಪೊಲೀಸರು ಬಂದೋಬಸ್ತ್ ಬಿಗಿಗೊಳಿಸುತ್ತಿರುವುದಕ್ಕೂ ಜನರು ತಾಳೆ ಹಾಕಿ ಮಾತನಾಡುತ್ತಿದ್ದಾರೆ.
ಜಿಲ್ಲಾಡಳಿತ ಈ ಬಗ್ಗೆ ಇನ್ನಷ್ಟೆ ಸ್ಪಷ್ಟನೆ ನೀಡಬೇಕಿದೆ.
ಜಿಲ್ಲಾಧಿಕಾರಿಗಳು ಮಾಹಿತಿ ನೀಡುವವರೆಗೂ ಜನರು ತಾಳ್ಮೆಯಿಂದ ಇರಬೇಕು. ಯಾವುದೇ ವದಂತಿ ಹಬ್ಬಿಸಬಾರದು ಎನ್ನುವುದು ಪ್ರಗತಿವಾಹಿನಿಯ ಕಳಕಳಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ