ಪ್ರಗತಿವಾಹಿನಿ ಸುದ್ದಿ, ಹತ್ತರಗಿ:
ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಹತ್ತರಗಿ ಟೋಲ್ ನಾಕಾದಲ್ಲಿ ಕೇವಲ 2 ಲೈನ್ ಗಳು ಮಾತ್ರ ಕಾರ್ಯಾಚರಿಸುತ್ತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.
ಸುಂಕ ವಸೂಲಿ ಕೇಂದ್ರದ ಕೆಲ ಸಾಲುಗಳು ತಾಂತ್ರಿಕ ಕಾರಣದಿಂದಾಗಿ ಬಂದಾಗಿದ್ದು ಭಾನುವಾರವಾದ್ದರಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ವಾಹನಗಳು ಓಡಾಡುತ್ತಿವೆ. ಆದರೆ ವಾಹನಗಳು ಸುಂಕ ನೀಡಲು ತಾಸು ಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ.
ಇದರಿಂದಾಗಿ ರೊಚ್ಚಿಗೆದ್ದ ವಾಹನ ಸವಾರರು ಟೋಲ್ ಅಧಿಕಾರಿಗಳ ವಿರುದ್ದ ಹರಿಹಾಯ್ದರು. ಇದಕ್ಕೆ ಕ್ಯಾರೆ ಎನ್ನದ ಸುಂಕ ವಸೂಲಿ ಕೇಂದ್ರದವರು ಇದ್ದ ೨ ಲೈನ್ ನಲ್ಲಿ ಸುಂಕ ವಸೂಲಿ ಮಾಡುತ್ತಾ ಕುಳಿತಿದ್ದಾರೆ. ಇದರಿಂದಾಗಿ ವಾಹನ ಸವಾರರ ಪರದಾಟಕ್ಕೆ ಬೇರೆ ದಾರಿಯಿಲ್ಲದಂತಾದಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ