
ಪ್ರಗತಿವಾಹಿನಿ ಸುದ್ದಿ: ಹೆಲಿಕಾಪ್ಟರ್ ಒಂದು ಲ್ಯಾಂಡಿಂಗ್ ವೇಳೆ ಸಮುದ್ರದಲ್ಲಿ ಪತನಗೊಂಡಿರುವ ಘಟನೆ ರಷ್ಯಾದ ಅಚಿ-ಸು ಗ್ರಾಮದ ಬಳಿ ನಡೆದಿದೆ.
ಕೆಎ-226 ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ನಿಯಂತ್ರಣ ಕಳೆದುಕೊಂಡಿದ್ದು, ಕ್ಯಾಸ್ಪಿಯನ್ ಸಮುದ್ರ ಪ್ರದೇಶದಲ್ಲಿ ಪತನಗೊಂಡಿದೆ. ಅಪಘಾತ ತಪ್ಪಿಸಲು ಪೈಲಟ್ ಹರಸಾಹಸಪಟ್ಟಿದ್ದಾರೆ. ಆದರೂ ಸುರಕ್ಷಿತ ಲ್ಯಾಂಡಿಂಗ್ ಸಾಧ್ಯವಾಗಿಲ್ಲ.
ಹೆಲಿಕಾಪ್ಟರ್ ಪತನದಲ್ಲಿ ಐವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.



