ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಭಾಗ್ಯಶ್ರೀ ಚಂದ್ರಕಾಂತ ತೋಳಿ ೧೩ ವರ್ಷ ಮತ್ತು ಕುಮಾರಿ ಮೀನಾಕ್ಷಿ ಚಂದ್ರಕಾಂತ ತೋಳಿ ೧೨ ವರ್ಷದ ಸಹೋದರಿಯರಿದ್ದು, ತಾಯಿಯು ಮಕ್ಕಳನ್ನು ತಾತ್ಕಾಲಿಕವಾಗಿ ರಕ್ಷಣೆ ಮತ್ತು ಪೋಷಣೆಗಾಗಿ ಸಂಸ್ಥೆಯಲ್ಲಿರಿಸಲು ಫೇಬ್ರುವರಿ ೨೫, ೨೦೧೬ ರಂದು ಬೆಳಗಾವಿಯ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು, ಹಾಗೂ ಸದಸ್ಯರುಗಳು, ಮಕ್ಕಳ ಹಾಗೂ ತಾಯಿಯನ್ನು ವಿಚಾರಿಸಲಾಗಿ ಮಕ್ಕಳ ಮುಂದಿನ ಶೈಕ್ಷಣಿಕ ಹಿತದೃಷ್ಠಿಯಿಂದ ಸದರಿ ಮಕ್ಕಳನ್ನು ತಾತ್ಕಾಲಿಕವಾಗಿ ರಕ್ಷಣೆ ಮತ್ತು ಪೋಷಣೆಗಾಗಿ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ಸಂಸ್ಥೆ ಬೆಳಗಾವಿಗೆ ಅಭಿರಕ್ಷಣೆಗಾಗಿ ಆದೇಶ ನೀಡಲಾಗಿದೆ.
ಮಕ್ಕಳು ಕಳೆದ ೫ ವರ್ಷಗಳಿಂದ ಸಂಸ್ಥೆಯ ಅಭಿರಕ್ಷಣೆಯಲ್ಲಿದ್ದರೂ ಸಹ ಇಲ್ಲಿಯವರೆಗೂ ಮಕ್ಕಳ ಬಗ್ಗೆ ವಿಚಾರಿಸಲು ಪೋಷಕರು ಹಾಗೂ ಸಂಬಂಧಿಕರು ಮುಂದೆ ಬಂದಿಲ್ಲ. ಸದ್ಯ ಸಹೋದರಿಯರಿಬ್ಬರು ಸಂಸ್ಥೆಯಲ್ಲಿಯೇ ವಿದ್ಯಾಭ್ಯಾಸವನ್ನು ಮುಂದುವರೆಸಿದ್ದಾರೆ.
ಮಕ್ಕಳ ಜೈವಿಕ ಪಾಲಕರು ಇದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ೨ ನೇ ಮಹಡಿ ಸುವರ್ಣಸೌಧ ಬೆಳಗಾವಿ ದೂರವಾಣಿ ಸಂಖ್ಯೆ: ೦೮೩೧-೨೪೭೪೧೧೧ ಯನ್ನು ಸಂಪರ್ಕಿಸಲು ಜಿಲ್ಲಾ ಮಕ್ಕಳ ರಕ್ಷಣಾಧಿಕರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ.ಸೌಂದರ್ಯ ಆತ್ಮಹತ್ಯೆ; ಮರಣೋತ್ತರ ಪರೀಕ್ಷಾ ವರದಿ ಹೇಳುವುದೇನು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ