
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹೆಸ್ಕಾಂ ಅಥಣಿ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ 110/11 ಕೆ.ವಿ ಹಲ್ಯಾಳ್ ವಿದ್ಯುತ್ ವಿತರಣಾ ಕೇಂದ್ರ ಹಾಗೂ 11 ಕೆ.ವಿ ಮಾರ್ಗಗಳಲ್ಲಿ ಉಪಕರಣ ಮತ್ತು ಪರಿವರ್ತಕಗಳ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವರಿಂದ ಸದರಿ ಮಾರ್ಗದಿಂದ ಸರಬರಾಜು ಆಗುವ ಹನುಮಾನ ಟೆಂಪಲ್, ಹಲ್ಯಾಳ, ಹುಲಗಬಾಳಿ ರಿವರ ಬೆಡ್, ಕರ್ಲಟ್ಟಿ+ಚಿಕ್ಕಟ್ಟಿ, ಯಲ್ಲಮ್ಮನವಾಡಿ, ಹಲ್ಯಾಳ ಗಾರ್ಡನ್, ದರೂರ ರಿವರ್ ಬೆಡ್, ನಾಗನೂರ, ಅವರಖೋಡ ಮಡ್ಡಿ, ಮಲ್ಟಿ ವಿಲೇಜ್ ವಾಟರ ಸಪ್ಪೆ, ಘಟನಟ್ಟಿ ಹಾಗೂ ಹಲ್ಯಾಳ ರಿವರ ಬೆಡ್ ಏರಿಯಾಗಳಿಗೆ ದಿನಾಂಕ: 21-02-2025 ರಂದು ಮುಂಜಾನೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ ಎಂದು ಹು.ವಿ.ಸ.ಕಂ.ನಿ ಅಥಣಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್(ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ