Belagavi NewsBelgaum NewsKannada NewsKarnataka NewsLatestPolitics

*ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಹರಿಸಲು ಸಚಿವ ಸತೀಶ್‌ ಜಾರಕಿಹೊಳಿ ಸೂಚನೆ*

ಪ್ರಗತಿವಾಹಿನಿ ಸುದ್ದಿ: ಹಿಡಕಲ್ ಜಲಾಶಯದಿಂದ ಪ್ರಟಪ್ರಭಾ ನದಿಗೆ 2 ಟಿಎಂಸಿ ನೀರು ಹರಿಸಲು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಆದೇಶ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ವಿಷಯ ತಿಳಿಸಿದ ಅವರು, ಪ್ರಸ್ತುತ ಬಾಗಲಕೋಟ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ ಹಾಗೂ ಮಳೆಯ ಕೊರತೆಯಿಂದಾಗಿ ಜನ- ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗಿದ್ದು, ದಿನಾಂಕ: 19.02.2024 ರಿಂದ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಕುಡಿಯುವ ಉದ್ದೇಶಕ್ಕಾಗಿ ಬಾಗಲಕೋಟ ಮತ್ತು ಮಾರ್ಗ ಮಧ್ಯದ ಹಳ್ಳಿಗಳಿಗೆ ಸರ್ಕಾರದ ಆದೇಶದನ್ವಯ ಕಾಯ್ದಿರಿಸಿದ 5.00 ಟಿ.ಎಂ.ಸಿಯಲ್ಲಿ 2.00 ಟಿ.ಎಂ.ಸಿ ನೀರನ್ನು ಹರಿಸಲು ಸಚಿವ ಸತೀಶ್‌ ಜಾರಕಿಹೊಳಿ ನಿರ್ದೇಶನ ನೀಡಿರುತ್ತಾರೆ.


ಅದರಂತೆ ಬಾಗಲಕೋಟಿ ಮತ್ತು ಮಾರ್ಗ ಮಧ್ಯದ ಹಳ್ಳಿಗಳಿಗೆ ನದಿ ಪಾತ್ರದ ಮೂಲಕ ಹರಿಬಿಡುವ ಪರಿಮಾಣದಲ್ಲಿ ಇನ್ನು 3.00 ಟಿ.ಎಂ.ಸಿ ನೀರು ಹರಿಬಿಡುವುದು ಬಾಕಿ ಉಳಿದಿರುತ್ತದೆ. ಮುಂದುವರೆದು ಶ್ರೀ ರಾಮೇಶ್ವರ ಏತ ನೀರಾವರಿ ಯೋಜನೆ ಮೂಲಕ ಕುಡಿಯುವ ಉದ್ದೇಶಕ್ಕಾಗಿ ಕೆರೆ ತುಂಬಿಸಲು 0.07 ಟಿ.ಎಂ.ಸಿ ನೀರನ್ನು ಸೇರಿಸಿ ಒಟ್ಟು 2.07 ಟಿ.ಎಂ.ಸಿ ನೀರನ್ನು ಘಟಪ್ರಭಾ ನದಿಗೆ ಈ ಕೆಳಗಿನಂತೆ ನೀರು ಹರಿಸುವ ಕುರಿತು ಸಚಿವ ಜಾರಕಿಹೊಳಿ ಆದೇಶ ಹೊರಡಿಸಿದ್ದಾರೆ.

Home add -Advt


ಆದ್ದರಿಂದ ಬಾಗಲಕೋಟೆ ಜಿಲ್ಲೆಯ ಭಾಗದ ರೈತರು ಹಾಗೂ ಸಾರ್ವಜನಿಕರು ನೀರನ್ನು ಪೋಲಾಗದಂತೆ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದ್ದಾರೆ.

Related Articles

Back to top button