Kannada NewsKarnataka NewsNationalPolitics

*ಪೋಕ್ಸೋ ಪ್ರಕರಣ: ಬಿಎಸ್‌ವೈ ಗೆ ಹೈಕೋರ್ಟ್ ರಿಲೀಫ್ *

ಪ್ರಗತಿವಾಹಿನಿ ಸುದ್ದಿ : ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕೇಳಿ ಬಂದಿದ್ದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪೋಕ್ಸೋ ಪ್ರಕರಣದಲ್ಲಿ ಬಿಎಸ್‌ವೈ ಅವರಿಗೆ ಹೈಕೋರ್ಟ್ ರಿಲೀಫ್ ನೀಡಿದೆ.

ಪ್ರಕರಣ ರದ್ದು ಕೋರಿ ಬಿಎಸ್ ವೈ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಆ.22ಕ್ಕೆ ನ್ಯಾಯಾಲಯ ನಿಗದಿ ಮಾಡಿದೆ. ಇದಲ್ಲದೇ ಮುಂದಿನ ವಿಚಾರಣೆವರೆಗೂ ಖುದ್ದು ಹಾಜರಾತಿಯಿಂದ ಬಿಎಸ್‌ವೈ ಸೇರಿದಂತೆ ಪ್ರಕರಣದ ಇತರ ಆರೋಪಿಗಳಿಗೂ ವಿನಾಯಿತಿ ನೀಡಿ ಕೋರ್ಟ್ ಆದೇಶಿಸಿದೆ. 

ಇದರೊಂದಿಗೆ ಯಡಿಯೂರಪ್ಪರನ್ನು ಅರೆಸ್ಟ್ ಮಾಡದಂತೆ ನೀಡಿದ್ದ ಆದೇಶವನ್ನೂ ವಿಸ್ತರಣೆ ಮಾಡಿ ಹೈಕೋರ್ಟ್ ಏಕಸದಸ್ಯ ಪೀಠ ಇಂದು ಮಧ್ಯಂತರ ಆದೇಶ ಹೊರಡಿಸಿದೆ.

ಸಹಾಯಕೋರಿ ಬಿಎಸ್‌ವೈ ಬಳಿ ಬಂದಿದ್ದ ತಾಯಿಯ ಅಪ್ರಾಪ್ತ ಪುತ್ರಿಯೋರ್ವಳೊಂದಿಗೆ ಬಿಎಸ್‌ವೈ ಅವರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ, ಬಾಲಕಿಯ ತಾಯಿ ಮಾರ್ಚ್‌ನಲ್ಲಿ ಬೆಂಗಳೂರಿನ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಸಿಐಡಿ ಪೊಲೀಸರು ತನಿಖೆ ಪೂರ್ಣಗೊಳಿಸಿ ಹೈಕೋರ್ಟ್‌ಗೆ ಚಾರ್ಜ್‌ಶೀಟ್ ಕೂಡ ಸಲ್ಲಿಸಿದ್ದರು.

Home add -Advt

Related Articles

Back to top button