ಪ್ರಗತಿವಾಹಿನಿ ಸುದ್ದಿ: ಗುಜರಾತಿನಲ್ಲಿ ಐಆರ್‌ಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಚಿರಾಗ್ ಝಿರ್ವಾಲ್ ವಿರುದ್ಧ ಪತ್ನಿ ಪೂರ್ವಾ ಅವರು ಪಶ್ಚಿಮ ಜೈಪುರದ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಮತ್ತು ದೈಹಿಕ ಸಂಬಂಧಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ.
ಐಆರ್‌ಎಸ್ ಅಧಿಕಾರಿಯ ಪತ್ನಿ ವರದಕ್ಷಿಣೆ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಇಡೀ ಪ್ರಕರಣ ಕೋಟಿ ರೂಪಾಯಿ ವರದಕ್ಷಿಣೆ ಮತ್ತು ದೈಹಿಕ ಸಂಬಂಧಕ್ಕೆ ಸಂಬಂಧಿಸಿದಾಗಿದೆ.
ಚಿರಾಗ್ ರಾಜಸ್ಥಾನದ ಝುಂಝುನೂ ಜಿಲ್ಲೆಯ ನಿವಾಸಿಯಾಗಿದ್ದಾರೆ. ಮದುವೆ ಬಳಿಕ ಚಿರಾಗ್ ಮತ್ತು ಆತನ ಪೋಷಕರು ಪೂರ್ವಾಗೆ ಕಿರುಕುಳ ನೀಡಲು ಆರಂಭಿಸಿದರು ಎಂದು ದೂರಿನಲ್ಲಿ ದಾಖಲಾಗಿದೆ. ಮದುವೆಯಾದ ಒಂದೂವರೆ ವರ್ಷದಲ್ಲಿ ಚಿರಾಗ್ ಪತ್ನಿ ಜೊತೆ ಎಂಟು ದಿನ ಮಾತ್ರ ಕಳೆದಿದ್ದಾರೆ. ಈ ಎಂಟು ದಿನದಲ್ಲಿ ಪತ್ನಿ ಜೊತೆ ದೈಹಿಕ ಸಂಬಂಧವೂ ಬೆಳೆಸಿಲ್ಲ. ಮದುವೆಯಾದಗಿನಿಂದ ಚಿರಾಗ್ ಪತ್ನಿಯಿಂದ ಅಂತರ ಕಾಯ್ದುಕೊಳ್ಳುತ್ತಾ ಬಂದಿದ್ದಾರೆ.
ಪೂರ್ವಾ ಹಾಗೂ ಕುಟುಂಬಸ್ಥರು ವರದಕ್ಷಿಣೆಗೆ ಡಿಮ್ಯಾಂಡ್ ಮಾಡೋದು ತಪ್ಪೆಂದು ಎಷ್ಟೇ ಮನವೊಲಿಸಿದರೂ ಚಿರಾಗ್ ಪೋಷಕರು ಅರ್ಥ ಮಾಡಿಕೊಂಡಿಲ್ಲ. ಚಿರಾಗ್ ಪೋಷಕರ ಕಿರುಕುಳ ಹೆಚ್ಚಾದಾಗ ಅಂತಿಮವಾಗಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ