LatestUncategorized

30 ಕಾಂಗ್ರೆಸ್ ಮುಖಂಡರ ಉಚ್ಛಾಟನೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿಂದ 30 ಜಿಲ್ಲಾ ಪದಾಧಿಕಾರಿಗಳನ್ನು ಉಚ್ಛಾಟನೆ ಮಾಡಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.

ಹಿಮಾಚಲ ಪ್ರದೇಶ ಚುನಾವಣೆ ಮತ ಎಣಿಕೆಗೂ ಮುನ್ನ ಕಾಂಗ್ರೆಸ್  ಮಹತ್ವದ ನಿರ್ಧಾರ ಕೈಗೊಂಡಿದ್ದು, ಪಕ್ಷದಿಂದ 30 ಜಿಲ್ಲಾ ಪದಾಧಿಕಾರಿಗಳನ್ನು 6 ವರ್ಷಗಳ ಕಾಲ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದೆ.

ಹಿಮಾಚಲಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಪ್ರತಿಭಾ ಸಿಂಗ್ ಈ ಆದೇಶ ಹೊರಡಿಸಿದ್ದಾರೆ. ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ ನಾಳೆ ಹೊರಬೀಳಲಿದ್ದು, ಫಲಿತಾಂಶಕ್ಕೂ ಮುನ್ನ ಕಾಂಗ್ರೆಸ್,  30 ಮುಖಂಡರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಿ ಕ್ರಮ ಕೈಗೊಂಡಿದೆ.

 

Home add -Advt

 

Related Articles

Back to top button