Kannada NewsLatest

ಹಿಂದೂ ರಾಷ್ಟ್ರ ಸ್ಥಾಪನೆಯಲ್ಲಿ ಯೋಗದಾನ ಮಾಡಲು  ಕೌಶಲ್ಯ ಅಭಿವೃದ್ಧಿ ಪಡಿಸಿ 

 

ರಾಮನಾಥಿ (ಗೋವಾ) :

ಮುಂದಿನ ದಿನಗಳಲ್ಲಿ ಹಿಂದೂ ಸಂಘಟನೆಯ ಕಾರ್ಯವನ್ನು ಬಹುದೊಡ್ಡ ಪ್ರಮಾಣದಲ್ಲಿ ಮಾಡಬೇಕಾಗಬಹುದು ಎಂದು ಸನಾತನ ಸಂಸ್ಥೆಯ ಧರ್ಮಪ್ರಸಾರಕರಾದ ಸದ್ಗುರು ನಂದಕುಮಾರ ಜಾಧವ ಕರೆ ನೀಡಿದರು.

ಶ್ರೀ ರಾಮನಾಥ ದೇವಸ್ಥಾನದ ಶ್ರೀ ವಿದ್ಯಾಧಿರಾಜ ಸಭಾಂಗಣದಲ್ಲಿ ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಅಂತರ್ಗತ ‘ಹಿಂದೂ ರಾಷ್ಟ್ರ ಸಂಘಟಕ ಪ್ರಶಿಕ್ಷಣ ಮತ್ತು ಅಧಿವೇಶನ’ದ ಉದ್ಘಾಟನೆಯ ಸಮಯದಲ್ಲಿ ‘ಹಿಂದೂ ರಾಷ್ಟ್ರ ಸಂಘಟಕದ ಕಾರ್ಯದ ದಿಕ್ಕು’ ಈ ವಿಷಯದ ಬಗ್ಗೆ ಅವರು ಮಾತನಾಡುತ್ತಿದ್ದರು. ಇದನ್ನು ಮಾಡುವಾಗ ಸಮವಿಚಾರಿ ರಾಷ್ಟ್ರ-ಧರ್ಮಪ್ರೇಮಿ ಹಾಗೂ ಸತ್ವಗುಣವಿರುವ ಹಿಂದೂಗಳ ಸಂಘಟನೆಯನ್ನು ಪ್ರಾಧಾನ್ಯತೆಯಿಂದ ಮಾಡಬೇಕು; ಏಕೆಂದರೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಈ ಹಿಂದೂಗಳೇ ಪ್ರತ್ಯಕ್ಷ ಯೋಗದಾನವನ್ನು ನೀಡುವರಿದ್ದಾರೆ. ಹಲವಾರು ಬಾರಿ ಹಿಂದುತ್ವನಿಷ್ಠರು ಭಾವನೆಯಿಂದ ಕಾರ್ಯವನ್ನು ಮಾಡುತ್ತಿರುತ್ತಾರೆ. ಭಾವನೆಯಿಂದಾಗಿ ಮಾಡಿದ ಕಾರ್ಯವು ಪರಿಣಾಮಕಾರಿಯಾಗಿರುವುದಿಲ್ಲ. ಆದ್ದರಿಂದ ಧರ್ಮಕಾರ್ಯದಲ್ಲಿ ಅಡಚಣೆಯಾಗುವ ಸಾಧ್ಯತೆ ಇರುತ್ತದೆ; ಆದ್ದರಿಂದ ಧರ್ಮಕಾರ್ಯವನ್ನು ವಿಚಾರಪೂರ್ವಕವಾಗಿ, ಜವಾಬ್ದಾರಿಯಿಂದ ಹಾಗೂ ಸಾಧನೆಯ ಅಧಿಷ್ಠಾನವನ್ನು ಇಟ್ಟು ಮಾಡುವ ಆವಶ್ಯಕತೆ ಇದೆ. ಆದ್ದರಿಂದ ಹಿಂದೂ ರಾಷ್ಟ್ರ ಸ್ಥಾಪನೆಯಲ್ಲಿ ಯೋಗದಾನ ನೀಡಲು ಗುಣಸಂವರ್ಧನೆ ಹಾಗೂ ಕೌಶಲ್ಯಾಭಿವೃದ್ಧಿ ಮಾಡಿ ಪ್ರಭಾವಶಾಲಿಯಾಗಿ ‘ಹಿಂದೂ ರಾಷ್ಟ್ರ ಸಂಘಟಕ’ರಾಗಿ ಎಂದು ಅವರು ಹೇಳಿದರು.

 ಗೌರವವಾಗಿ ಬದುಕಲು ಹಿಂದೂ ರಾಷ್ಟ್ರವೇ ಬೇಕು

ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ ಶಿಂದೆ ಮಾತನಾಡುತ್ತಾ, “೮೦೦ ವರ್ಷಗಳ ಕಾಲ ಹೋರಾಡಿದ ನಂತರವೂ ಮತಾಂಧರು ಅಸ್ಸಾಂಅನ್ನು ಗೆಲ್ಲಲಾಗಲಿಲ್ಲ; ತದ್ವಿರುದ್ಧ ಸ್ವಾತಂತ್ರ್ಯದ ನಂತರ ನಿರ್ಮಾಣವಾಗಿದ್ದ ‘ಸೆಕ್ಯುಲರ್ ವ್ಯವಸ್ಥೆಯನ್ನು ಉಪಯೋಗಿಸಿ ಮತಾಂಧರು ಅರ್ಧಕ್ಕಿಂತಲೂ ಹೆಚ್ಚು ಅಸ್ಸಾಂಅನ್ನು ವಶಕ್ಕೆ ತೆಗೆದುಕೊಂಡರು ಮತ್ತು ಈಗ ಅದನ್ನು ‘ಗ್ರಾಂಡ್ ಬಾಂಗ್ಲಾದೇಶ’ ನಿರ್ಮಾಣ ಮಾಡಲು ನೋಡುತ್ತಿದ್ದಾರೆ;  ಹಿಂದೂ ರಾಷ್ಟ್ರವು ವೇದಕಾಲದಿಂದ ಇರುವ ಭಾರತದ ಎಲ್ಲಕ್ಕಿಂತ ಪ್ರಾಚೀನ ಸಂಕಲ್ಪನೆಯಾಗಿದೆ; ಆದರೆ ೧೯೪೭ ರ ನಂತರ ರಾಷ್ಟ್ರ ಈ ಪರಿಕಲ್ಪನೆಯನ್ನು ಸಂಚಿನ ಮೂಲಕ ಭಾರತೀಯರ ಮನಸ್ಸಿನಿಂದ ಮರೆಮಾಚಲು ಪ್ರಯತ್ನಿಸಲಾಯಿತು.

‘ಸೆಕ್ಯುಲರ್’ ವ್ಯವಸ್ಥೆಯಲ್ಲಿ ರಾಷ್ಟ್ರದ ಪ್ರಾಚೀನ ಇತಿಹಾಸವನ್ನು ನಿರಾಕರಿಸುತ್ತಿದ್ದಾರೆ. ಬಹುಸಂಖ್ಯಾತರಾಗಿದ್ದ ಹಿಂದೂಗಳ ದೇಶದಲ್ಲಿ ‘ಸೆಕ್ಯುಲರ್’ವ್ಯವಸ್ಥೆಯಿಂದಾಗಿ ಹಿಂದೂಗಳಿಗೆ ಎರಡನೇ ಸ್ಥಾನ ನೀಡಲಾಗುತ್ತಿದೆ. ದೇಶದಲ್ಲಿ ಅಲ್ಪಸಂಖ್ಯಾತರಿಗಾಗಿ ಅಲ್ಪಸಂಖ್ಯಾತರ ಸಚಿವಾಲಯವಿದ್ದು ಅದಕ್ಕಾಗಿಯೇ ಬೇರೆಯೇ ಬಜೆಟ್ ಇದೆ. ತದ್ವಿರುದ್ಧ ಬಹುಸಂಖ್ಯಾತ ಹಿಂದೂಗಳಿಗಾಗಿ ಸಚಿವಾಲಯವೂ ಇಲ್ಲ ಹಾಗೂ ಬಜೆಟ್ ಕೂಡ ಇಲ್ಲ, ಆದ್ದರಿಂದ ಬಹುಸಂಖ್ಯಾತ ಹಿಂದೂಗಳಿಗೆ ಗೌರವದಿಂದ ಜೀವಿಸಲು ಹಿಂದೂ ರಾಷ್ಟ್ರವೇ ಬೇಕು !” ಎಂದು ಹೇಳಿದರು.

ಅಧಿವೇಶನದ ಆರಂಭದಲ್ಲಿ ಶಂಖನಾದವನ್ನು ಮಾಡಲಾಯಿತು. ದೀಪಪ್ರಜ್ವಲನೆಯನ್ನು ಮಾಡಿದ ನಂತರ ಸನಾತನದ ಪುರೋಹಿತ ಪಾಠಶಾಲೆಯ ಪುರೋಹಿತರು ವೇದಮಂತ್ರದ ಪಠಣವನ್ನು ಮಾಡಿದರು. ಹಿಂದೂ ಜನಜಾಗೃತಿ ಸಮಿತಿಯ ಪ್ರೇರಣಾಸ್ಥಾನ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಅಠವಲೆ ಇವರು ಅಧಿವೇಶನದ ನಿಮಿತ್ತ ನೀಡಿದ ಸಂದೇಶವನ್ನು ಸನಾತನ ಸಂಸ್ಥೆಯ ಧರ್ಮಪ್ರಸಾರಕರಾದ ಸದ್ಗುರು ಸತ್ಯವಾನ ಕದಮ ಇವರು ಓದಿದರು.

ಅಧಿವೇಶನದ ಸೂತ್ರಸಂಚಾಲನೆಯನ್ನು ಸಮಿತಿಯ ಸುಮಿತ ಸಾಗ್ವೇಕರ ಇವರು ಮಾಡಿದರು. ಈ ಸಮಯದಲ್ಲಿ ಹಿಂದೂ ರಾಷ್ಟ್ರದ ವಿಷಯದ ವ್ಯಾಪಕರೀತಿಯಲ್ಲಿ ಪ್ರಸಾರವನ್ನು ಮಾಡಲು ಏನು ಮಾಡಬೇಕು, ಹಿಂದೂ ರಾಷ್ಟ್ರ ಜಾಗೃತಿ ಸಭೆಗಳ ಸಂಕ್ಷಿಪ್ತ ವಾರ್ಷಿಕ ವರದಿ, ಫಲನಿಷ್ಪತ್ತಿ, ಧರ್ಮಪ್ರೇಮಿಗಳಿಂದ ಆದ ಪ್ರಯತ್ನಗಳ ಅನುಭವಕಥನ ಹಾಗೂ ಇತರ ವಿಷಯಗಳ ಬಗ್ಗೆ ಮಾರ್ಗದರ್ಶನವನ್ನು ಮಾಡಲಾಯಿತು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button