Kannada NewsLatest

‘ಐಸಿಸ್’ ಗೆ ಓವೈಸಿಯಿಂದ ಬಹಿರಂಗ ಸಹಾಯ -ಶಾಸಕ ಟಿ. ರಾಜಾಸಿಂಗ್

ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಸಮಾರೋಪ  

ರಾಮನಾಥಿ (ಗೋವಾ)-
‘ಭಾಗ್ಯನಗರ (ಹೈದ್ರಾಬಾದ್)ದಲ್ಲಿ ೨೦೦೨ರಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಅನೇಕ ಅಮಾಯಕರು ಬಲಿಯಾಗಿದ್ದರು. ಈ ಪ್ರಕರಣದಲ್ಲಿ ಬಂಧಿಸಲಾಗಿದ್ದ ಭಯೋತ್ಪಾದಕರಿಗೆ ‘ಎಮ್.ಐ.ಎಮ್’ನ ಓವೈಸಿಯು ಸಹಾಯ ಮಾಡಿದ್ದರು. ನಂತರ ೧ ಜೂನ್ ೨೦೧೮ಕ್ಕೆ ‘ಎನ್.ಐ.ಎ.’ದವರು ‘ಐಸಿಸ್’ನ ೧೨ ಭಯೋತ್ಪಾದಕರನ್ನು ಬಂಧಿಸಿದ್ದರಿಂದ ಅವರು ನನ್ನ ಮೇಲೆ ಹಾಗೂ ಶ್ರೀ ಭಾಗ್ಯಲಕ್ಷ್ಮೀ ದೇವಸ್ಥಾನದ ಮೇಲೆ ದಾಳಿ ಮಾಡುವ ಸಂಚು ವಿಫಲವಾಯಿತು.
‘ಎನ್.ಐ.ಎ.’ದವರು ಬಂಧಿಸಿದ ಎಲ್ಲ ಭಯೋತ್ಪಾದಕರಿಗೆ ನಾವು ಸಹಾಯ ಮಾಡುವೆವು’, ಎಂದು ಓವೈಸಿ  ಘೋಷಿಸಿದರು. ಈ ರೀತಿ ‘ಎಮ್.ಐ.ಎಮ್’ನ ಓವೈಸಿ  ಬಹಿರಂಗವಾಗಿ ಭಯೋತ್ಪಾದಕರಿಗೆ ಬೆಂಬಲಿಸುತ್ತಿದ್ದಾರೆ ಎಂದು ತೆಲಂಗಾಣದ ಭಾಜಪ ಶಾಸಕ ಟಿ. ರಾಜಾಸಿಂಗ್   ಹೇಳಿದರು.

ಅವರು ಜೂನ್ ೪ ರಂದು ‘ಹಿಂದುತ್ವದ ಕಾರ್ಯವನ್ನು ಮಾಡುತ್ತಿರುವಾಗ ಎದುರಾದ ವಿರೋಧ ಹಾಗೂ ಅದಕ್ಕೆ ಮಾಡಿದ ಪ್ರತಿಕಾರ’ ಈ ವಿಷಯದಲ್ಲಿ ಶ್ರೀ ರಾಮನಾಥ ದೇವಸ್ಥಾನದ ಶ್ರೀ ವಿದ್ಯಾಧಿರಾಜ ಸಭಾಂಗಣದಲ್ಲಿಯ ‘ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಏಳನೇ ದಿನ (ಸಮಾರೋಪದ ದಿನ) ಮಾತನಾಡುತ್ತಿದ್ದರು.
 ಈ ರೀತಿಯ ಪ್ರತಿಕೂಲ ಪರಿಸ್ಥಿತಿಯಲ್ಲಿ ಹಿಂದೂಗಳ ಪ್ರಭಾವಶಾಲಿ ಸಂಘಟನೆಯನ್ನು ನಾವು ನಿರ್ಮಿಸಿದೆವು. ಹಿಂದೆ ತೆಲಂಗಾಣ ರಾಜ್ಯದಲ್ಲಿ ಬಹಿರಂಗವಾಗಿ ಗೋಮಾತೆಯ ಹತ್ಯೆ ಮಾಡುತ್ತಿದ್ದರು.
ನಮ್ಮ ಕಾರ್ಯ ಆರಂಭವಾದಾಗಿನಿಂದ ಬಕ್ರಿದ್‌ನ ಮೊದಲು ಪೊಲೀಸ್ ಆಡಳಿತವು ಸ್ವತಃ ಕಾರ್ಯಪ್ರವೃತ್ತವಾಗಿದೆ ಹಾಗೂ ಗಡಿಭಾಗದಲ್ಲಿ ಗಸ್ತು ಹಾಕುವುದು, ಗೋಕಳ್ಳಸಾಗಾಟಗಾರರನ್ನು ಬಂಧಿಸುವುದು  ಮಾಡುತ್ತಿದೆ. ಇದು ಹಿಂದೂ ಸಂಘಟನೆಯ ಶಕ್ತಿಯಾಗಿದ್ದು, ನಮ್ಮನ್ನು ಇತಿಹಾಸವು ನೆನಪಿನಲ್ಲಿಡುವಂತಹ ಕಾರ್ಯವನ್ನು ಮಾಡಿ’ ಎಂದು ಅವರು ಹೇಳಿದರು.
 

  ಲೂಟಿ  ತಡೆಯಲು ದೇವಸ್ಥಾನಗಳನ್ನು ಸರಕಾರದ  ವಶದಿಂದ ಮುಕ್ತಗೊಳಿಸುವುದು ಆವಶ್ಯ 

‘ದೇವಸ್ಥಾನ ಸರಕಾರಿಕರಣಕ್ಕೆ ವಿರೋಧ’ ಈ ವಿಷಯದ ಬಗ್ಗೆ ಮಾತನಾಡಿದ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಕಿರಣ ಬೆಟ್ಟಾದಾಪೂರ, “ಭಾರತ ಸ್ವತಂತ್ರವಾಯಿತು; ಆದರೆ ಹಿಂದೂಗಳಿಗೆ ಧಾರ್ಮಿಕ ಸ್ವಾತಂತ್ರ್ಯ ಸಿಗಲಿಲ್ಲ. ದೇವಸ್ಥಾನಗಳ ಸರಕಾರಿಕರಣ ಮತ್ತು ಈ ಮೂಲಕ ಆಗುವ ಭ್ರಷ್ಟಾಚಾರ ಇದು ಗಂಭಿರ ವಿಷಯವಾಗಿದೆ.
ದೇಶದ ನಾಲ್ಕುವರೆ ಲಕ್ಷ ದೇವಸ್ಥಾನಗಳು ಸರಕಾರದ ವಶದಲ್ಲಿದ್ದು ಅದರಲ್ಲಿ ಎಷ್ಟು ಪ್ರಮಾಣದಲ್ಲಿ ಭ್ರಷ್ಟಾಚಾರವಿರಬಹುದು. ಇದರ ಬಗ್ಗೆ ನಾವು ಕಲ್ಪನೆ ಮಾಡಲೂ ಸಾಧ್ಯವಿಲ್ಲ. ಕಲ್ಲಿದ್ದಲು ಹಗರಣವು ೧ ಲಕ್ಷದ ೮೦ ಸಾವಿರ ಕೋಟಿ ರೂಪಾಯಿಗಳದ್ದಾಗಿದ್ದರೆ ದೇವಸ್ಥಾನಗಳಲ್ಲಿನ ವಿವಿಧ ಭ್ರಷ್ಟಾಚಾರವು ಅದಕ್ಕಿಂತಲೂ ಎಷ್ಟೋ ಪಟ್ಟು ಇರಬಹುದು.
ಕೇವಲ ಕರ್ನಾಟಕ ರಾಜ್ಯದ ವಿಚಾರ ಮಾಡಿದರೆ ಕರ್ನಾಟಕ ಸರಕಾವು ೩೫ ಸಾವಿರ ದೇವಸ್ಥಾನಗಳಿಂದ ೧೦ ಸಾವಿರ ಕೋಟಿ ರೂಪಾಯಿಗಳನ್ನು ಸಂಗ್ರಹಿಸುತ್ತದೆ; ಆದರೆ ಅದರಲ್ಲಿನ ಹೆಚ್ಚಿನ ಖರ್ಚನ್ನು ಚರ್ಚ, ಪ್ರವಾಹನಿಧಿಯಂತಹ ಹಿಂದೂ ಧರ್ಮಕ್ಕೆ ಸಂಬಂಧಿಸದ ವಿಷಯಗಳಿಗಾಗಿ ಬಳಸಲಾಗುತ್ತದೆ. ಭಗವದ್ಗೀತೆಯಲ್ಲಿನ ‘ಯದಾ ಯದಾ ಹಿ ಧರ್ಮಸ್ಯ…’ ಈ ಶ್ಲೋಕದಿಂದ ಪ್ರೇರಣೆ ಪಡೆದು ಸ್ವತಃ ನಮ್ಮಿಂದಲೇ ಧರ್ಮಕಾರ್ಯವನ್ನು ಆರಂಭಿಸಬೇಕು’, ಎಂದರು.
ಈ ಸಮಯದಲ್ಲಿ ಇಂದೂರಿನ (ಮಧ್ಯಪ್ರದೇಶದ) ಅಖಿಲ ಭಾರತೀಯ ಹಿಂದೂ ಮಹಾಸಭೆಯ ಪ್ರದೇಶ ಪ್ರಧಾನ ಕಾರ್ಯದರ್ಶಿ  ಜಿತೇಂದ್ರ ಸಿಂಹ ಠಾಕೂರ, ಪ್ರತಾಪಗಢ (ಉತ್ತರಪ್ರದೇಶ)ದ   ಪ್ರತಾಪಸಿಂಹ ಠಾಕೂರ, ವಾರಾಣಸಿಯ (ಉತ್ತರಪ್ರದೇಶದ) ‘ಇಂಡಿಯಾ ವಿಥ ವಿಸ್ಡಮ ಗ್ರುಪ್’ನ ಸಂಯೋಜಕ  ಅನುರಾಗ ಪಾಂಡೇಯ ಹಾಗೂ ಹಿಂದೂ ಮಹಾಸಭಾದ ಕಾರ್ಯಾಲಯ ಸಚಿವ  ವೀರೇಶ ತ್ಯಾಗಿ  ವಿವಿಧ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು
.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button