*ಪ್ರಾಥಮಿಕ ಶಿಕ್ಷಣ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯಾಗಬೇಕು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್*
ಪ್ರಗತಿವಾಹಿನಿ ಸುದ್ದಿ: ಜೀವನದಲ್ಲಿ ಎಲ್ಲದಕ್ಕಿಂತ ಶ್ರೇಷ್ಠದಾನ ವಿದ್ಯಾದಾನ. ಪ್ರಾಥಮಿಕ ಶಿಕ್ಷಣ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯಾಗಬೇಕು. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಬಿ.ಕೆ.ಇಟಗಿ ಶಿಕ್ಷಣ ಸಂಸ್ಥೆ ಜಿಲ್ಲೆಯಾದ್ಯಂತ ಹೆಸರುವಾಸಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಹಿರೇಬಾಗೇವಾಡಿ ಗ್ರಾಮದ ಗ್ರೂಪ್ ವಿದ್ಯಾವರ್ಧಕ ಸಂಘ, ಕರ್ನಾಟಕ ಸಂಯುಕ್ತ ಪದವಿಪೂರ್ವ ಕಾಲೇಜು, ಕರ್ನಾಟಕ ಬಾಲನಿಕೇತನ ಕನ್ನಡ ಪ್ರಾಥಮಿಕ ಶಾಲೆ, ಬಿ.ಕೆ.ಇಟಗಿ ರಾಷ್ಟ್ರೀಯ ಇಂಗ್ಲೀಷ್ ಮಿಡಿಯಂ ಸ್ಕೂಲ್ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ 2023-24 ಹಾಗೂ ಸನ್ಮಾನ ಮತ್ತು ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಶಾಲಾಮಕ್ಕಳ ಬಗ್ಗೆ ಆಡಳಿತ ಮಂಡಳಿ ತೆಗೆದುಕೊಳ್ಳುವ ಕಾಳಜಿ ನಿಜಕ್ಕೂ ಮೆಚ್ಚುವಂಥದ್ದು ಎಂದರು.
ಮಕ್ಕಳ ಭವಿಷ್ಯದ ಬಗ್ಗೆ ಸದಾಚಿಂತಿಸುವ ಆಡಳಿತ ಮಂಡಳಿ ನಿರ್ದೇಶಕರು, ವೈಯಕ್ತಿಕವಾಗಿ ಶಾಲೆಗೆ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದೇನೆ. ಇಲ್ಲಿ ಓದುವ ಮಕ್ಕಳ ಭವಿಷ್ಯ ಉಜ್ವಲವಾಗಿರಲಿ. ಮುಂದಿನ ದಿನಗಳಲ್ಲೂ ಶಾಲೆ ಇನ್ನು ಚೆನ್ನಾಗಿ ನಡೆಯಲಿ ಎಂದು ಸಚಿವರು ಹಾರೈಸಿದರು.
ಸಮಾರಂಭದಲ್ಲಿ ಗ್ರಾಮದ ಹಿರಿಯರು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸುರೇಶ ಇಟಗಿ, ಸಿ ಸಿ ಪಾಟೀಲ ಅಣ್ಣ, ಬಿ.ಜಿ.ವಾಲಿಇಟಗಿ, ಪುಷ್ಪಾವತಿ ನಾಯ್ಕರ್, ಎಸ್.ಸಿ.ಓಂಕಾರಿ, ಉಳವಪ್ಪ ನಂದಿ, ರಮೇಶ ಬಸರಕೊಡ್, ಆಯ್.ಬಿ.ಅರಳಿಕಟ್ಟಿ, ವಾಯ್.ಎಲ್.ಪಾಟೀಲ, ಗೊದಮ್ಮ ಭರಮನಿ, ದಯಾನಂದ ಹಂಚಿನಮನಿ, ಶಿವನಾಯ್ಕ ನಾಯ್ಕರ್, ಶಿವಲಿಂಗ ಗುಂಧಾನಿ, ಪಿ.ಎಸ್. ಕಳಸದ, ಎಂ.ಕೆ.ಕರಿದಾವಲ್, ಆನಂದ ಕಳಸದ, ಆನಂದ ಶಿರಕೋಳ, ಗೌಸಮೊದ್ದಿನ ಜಾಲಿಕೊಪ್ಪ, ಶ್ರೀಕಾಂತ ಮಾದುಭರಮಣ್ಣವರ, ಅಡಿವೇಶ್ ಇಟಗಿ, ಯಲ್ಲಪ್ಪ ಕೆಳಗೇರಿ, ಸೈಯದ್ ಸನದಿ, ಗೌಡಪ್ಪ ಹಾದಿಮನಿ, ಸಲೀಂ ಸತ್ತಿಗೇರಿ, ಹಾಗೂ ಶಿಕ್ಷಣ ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ