Kannada NewsKarnataka NewsLatest

*ಮಳೆಗೆ ಉರಳಿ ಬಿದ್ದ ಹಂಪಿಯ ಐತಿಹಾಸಿಕ ಕಲ್ಲಿನ ಕಂಬಗಳು*

ಪ್ರಗತಿವಾಹಿನಿ ಸುದ್ದಿ: ದಕ್ಷಿಣ ಕಾಶಿ ಹಂಪಿಯಲ್ಲಿ ಭಾನುವಾರ ಸುರಿದ ಭಾರಿ ಮಳೆಗೆ ಪಂಪಾ ವಿರೂಪಾಕ್ಷನ ರಥ ಬೀದಿಯ ಸಾಲುಮಂಟಪದ ಕಲ್ಲಿನ ಕಂಬಗಳು ಉರುಳಿಬಿದ್ದಿವೆ.

ವಿಪರೀತ ತಾಪಮಾನ ಹೆಚ್ಚಳದಿಂದ ಹಂಪಿ ಸ್ಮಾರಕಗಳು ಕಾದು ಕೆಂಡವಾಗಿದ್ದವು. ಇದೀಗ ಮೊದಲ ಮಳೆಗೆ ಬಿಸಿಗೊಳಿಸಿದ ಸೀಸ ತಣ್ಣೀರಲ್ಲಿ ಕತ್ತರಿಸಿಕೊಂಡು ಬಿಳುವಂತೆ ಮಂಟಪದ ಕಂಬಗಳು ಉರುಳಿಬಿದ್ದಿವೆ. ಪಂಪಾ ವಿರೂಪಾಕ್ಷನ ರಥ ಬೀದಿಯ ಸಾಲುಮಂಟಪಗಳು ವಿಜಯನಗರ ಸಾಮ್ರಾಜ್ಯದ ಅರಸರು ನಿರ್ಮಿಸಿದ್ದರು. ಯುನೆಸ್ಕೋ ಪಟ್ಟಿಗೆ ಸೇರಿದ ಹಂಪಿಯ ಸ್ಮಾರಕಗಳ ರಕ್ಷಣೆಗೆ ಕೋಟ್ಯಂತರ ರೂ. ಹಣ ಬರ್ತಿದ್ರೂ ಸರಿಯಾಗಿ ನಿರ್ವಹಣೆ ಮಾಡುವಲ್ಲಿ ಇಲಾಖೆ ವಿಫಲವಾಗಿದೆ.‌ ಮೊದಲ ಮಳೆಗೆ ಹಂಪಿ ಸ್ಮಾರಕ ಮಂಟಪದ ಕಂಬಗಳು ಉರುಳಿಬಿದ್ದ ಘಟನೆ ಕಂಡು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

Related Articles

Back to top button